ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ : 18ಕ್ಕೂ ಹೆಚ್ಚು ಜನ ಸಾವು

ಅಫ್ಘಾನಿಸ್ತಾನ : ಪಶ್ಚಿಮ ಅಫ್ಘಾನಿಸ್ತಾನದ ಹೆರಾತ್ ನಲ್ಲಿರುವ ಮಸೀದಿಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಉನ್ನತ ಮಟ್ಟದ ತಾಲಿಬಾನ್ ಪರ ಧರ್ಮ ಗುರುಗಳು ಸೇರಿದಂತೆ 18ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ಧಾರೆ. "ಮುಜೀಬ್ ರಹಮಾನ್ ಅನ್ಸಾರಿ, ಅವರ ಕೆಲವು ಸಿಬ್ಬಂದಿ ಮತ್ತು ನಾಗರಿಕರು ಮಸೀದಿಯ ಕಡೆಗೆ ಹೋಗುತ್ತಿದ್ದಾಗ ಕೊಲ್ಲಲ್ಪಟ್ಟರು" ಎಂದು ಹೆರಾತ್ ನ ಪೊಲೀಸ್ ವಕ್ತಾರ ಮಹಮೂದ್ ರಸೋಲಿ ಹೇಳಿದ್ದಾರೆ. ಕೊಲ್ಲಲ್ಪಟ್ಟವರ ಬಗ್ಗೆ ಅಧಿಕೃತ ಸಂಖ್ಯೆ ನೀಡದಿದ್ದರೂ, ಅಲ್ ಜಜೀರಾ ಮೀಡಿಯಾ ನೆಟ್ ವರ್ಕ್, ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ, 14 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಪಶ್ಚಿಮ ನಗರದ ಹೆರಾತ್ ನಲ್ಲಿರುವ ಗುಜರ್ಗಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಈ ಸಮಯದಲ್ಲಿ ಮುಸ್ಲಿಂ ಪ್ರಾರ್ಥನಾ ಸ್ಥಳಗಳು ವಿಶೇಷವಾಗಿ ಜನಸಂದಣಿಯಿಂದ ಕೂಡಿರುತ್ತವೆ.ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಮತ್ತು 21 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ವೈದ್ಯರೊಬ್ಬರನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ.

Edited By : Nirmala Aralikatti
PublicNext

PublicNext

02/09/2022 10:52 pm

Cinque Terre

62.42 K

Cinque Terre

4

ಸಂಬಂಧಿತ ಸುದ್ದಿ