ದಾವಣಗೆರೆ: ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ 22 ಲಕ್ಷ ರೂಪಾಯಿ ವಂಚನೆ ಮಾಡಿದ್ದ ಆರೋಪಿಯನ್ನು ಸಂತೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
70 ವರ್ಷದ ದುಗ್ಗಪ್ಪ ಅಲಿಯಾಸ್ ದುರಗಪ್ಪ ಬಂಧಿತ ಆರೋಪಿ. ಚನ್ನಗಿರಿ ಪೊಲೀಸ್ ಉಪ ವಿಭಾಗ ವ್ಯಾಪ್ತಿಯಲ್ಲಿ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ 22 ಲಕ್ಷ ರೂಪಾಯಿ ಜನರಿಂದ ಪಡೆದು ವಂಚನೆ ಮಾಡಿದ್ದ.
ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿತ್ತು. ಚನ್ನಗಿರಿಯ ಎಸ್.ಬಿ.ಆರ್. ಕಾಲೋನಿಯ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿ ಒಟ್ಟು 22 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ.
PublicNext
24/08/2022 07:55 pm