ಮಹಾರಾಷ್ಟ್ರ : ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಹರಿಹರೇಶ್ವರ ಕರಾವಳಿಯಲ್ಲಿ ಶಂಕಾಸ್ಪದ ರೀತಿಯಲ್ಲಿ ಬೋಟ್ ಗಳು ಪತ್ತೆಯಾಗಿವೆ. ಇನ್ನು ಈ ಬೋಟ್ ಗಳಲ್ಲಿ AK 47, ಹಲವು ರೈಫಲ್ಸ್ ಹಾಗೂ ಬುಲೆಟ್ ಗಳು ಪತ್ತೆಯಾಗಿವೆ. ಸ್ಥಳೀಯರಿಂದ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಮಹಾರಾಷ್ಟ್ರ ಪೊಲೀಸರು ಉಗ್ರರ ಬೋಟ್ ಇರಬಹುದು ಎಂದು ಶಂಕಿಸಿದ್ದಾರೆ.
ಸದ್ಯ ಬೋಟ್ ಸಿಕ್ಕ ಪ್ರದೇಶಗಳಲ್ಲಿ ಹೈ ಅರ್ಲಟ್ ಘೋಷಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇನ್ನು ಎರಡು ಬೋಟ್ ಗಳು ಪ್ರತ್ಯೇಕ ಸ್ಥಳಗಳಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ.
PublicNext
18/08/2022 04:05 pm