ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಡುಗಿ ಮೇಲೆ ಗುಂಡು ಹಾರಿಸಿದ ಪುಂಡ : ವಿಡಿಯೋ ವೈರಲ್

ಬಿಹಾರದ ಪಾಟ್ನಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಫಲವಾಗಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬುಧವಾರ ತರಕಾರಿ ವ್ಯಾಪಾರಿಯ ಮಗಳ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿರುವ ಘಟನೆ ಬೇರ್ ಪೊಲೀಸ್ ಠಾಣೆಯ ಸಿಪಾರಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಬುಧವಾರ ಮುಂಜಾನೆ ಈ ಘಟನೆ ನಡೆದಿದ್ದು, 15 ವರ್ಷದ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಬೇರ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿಪಾರಾದ ಇಂದ್ರಪುರಿ ಪ್ರದೇಶದ ಬೀದಿಯಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ.

ತರಕಾರಿ ವ್ಯಾಪಾರಿಯ ಮಗಳಾಗಿರುವ ಬಾಲಕಿ ಗುಂಡೇಟಿನಿಂದ ಬೆನ್ನು ಮತ್ತು ಕುತ್ತಿಗೆ ಭಾಗಕ್ಕೆ ಗಾಯಗಳಾಗಿವೆ.ಇಡೀ ಘಟನೆಯು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಮತ್ತು ದೃಶ್ಯಗಳ ಪ್ರಕಾರ, ದಾಳಿಕೋರನು ಹುಡುಗಿಗಾಗಿ ಕಾಯುತ್ತಿರುವುದು ಕಂಡು ಬಂದಿದೆ.

ಗಾಯಗೊಂಡಿರುವ ಬಾಲಕಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ, ಈ ಘಟನೆಗೆ ಪ್ರೇಮ ಪ್ರಕರಣ ಎಂದು ಹೇಳಲಾಗುತ್ತಿದೆ. ಎಂದು ಪಾಟ್ನಾ ಪೊಲೀಸರು ಹೇಳಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.

Edited By : Nirmala Aralikatti
PublicNext

PublicNext

18/08/2022 03:48 pm

Cinque Terre

74.93 K

Cinque Terre

1