ಲಕ್ನೋ: ತಂದೆಯೋರ್ವ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ ಗೂಡ್ಸ್ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಉಜ್ಜೈನಿಯಲ್ಲಿ ನಡೆದಿದೆ.
ಉಜ್ಜೈನಿಯಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ನಾಯ್ ಖೇಡಿ ರೈಲು ನಿಲ್ದಾಣದ ಬಳಿಯ ರೈಲ್ವೆ ಹಳಿ ಮೇಲೆ ಮೃತದೇಹಗಳು ದೊರೆತಿವೆ.
ಭೈರವಗಢ ಪೊಲೀಸ್ ಠಾಣೆ ವ್ಯಾಪ್ತಿಯ ಗೋಯಾಲಾ ಬುಜುರ್ಗ್ ಗ್ರಾಮದ ನಿವಾಸಿ ರವಿ (35), ಆತನ ಮಕ್ಕಳಾದ ಅನಾಮಿಕಾ (12), ಆರಾಧ್ಯ (7) ಮತ್ತು ಅನುಷ್ಕಾ (4) ಮೃತರು ಎಂದು ಗುರುತಿಸಲಾಗಿದೆ. ರೈಲ್ವೆ ಹಳಿ ಪಕ್ಕದಲ್ಲಿ ಬೈಕ್ ನಿಲ್ಲಿಸಲಾಗಿದೆ. ಟ್ರ್ಯಾಕ್ ಬಳಿ ಚಪ್ಪಲಿ, ಮಕ್ಕಳಿಗೆ ಕೊಡಿಸಲಾಗಿದ್ದ ಚಿಪ್ಸ್ ಪಾಕೆಟ್ ಪತ್ತೆಯಾಗಿವೆ.
PublicNext
18/08/2022 08:10 am