ಬಾಗಲಕೋಟೆ: ರಜೆ ಮೇಲೆ ಊರಿಗೆ ಬಂದಿದ್ದ ಯೋಧನನ್ನ ಬಾಮೈದನೇ ಕೊಲೆಗೈದ ಘಟನೆ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ.
25 ವರ್ಷದ ಕರಿಸಿದ್ದಪ್ಪ ಕಳಸದ ಮೃತ ದುರ್ದೈವಿ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ನಾಲ್ಕು ದಿನದ ಹಿಂದೆ ರಜೆಗಾಗಿ ರಾಜಸ್ಥಾನದಿಂದ ಮನೆಗೆ ವಾಪಸ್ ಆಗಿದ್ದರು. ಕೊಲೆಗೈದ ಆರೋಪಿಯನ್ನು ಸಿದ್ದನಗೌಡ ದೂಳಪ್ಪ ಎಂದು ಗುರುತಿಸಲಾಗಿದೆ.
ಊಟ ನೀಡುವ ವೇಳೆ ಯೋಧ ಹಾಗೂ ಆತನ ಪತ್ನಿ ವಿದ್ಯಾ ನಡುವೆ ಕ್ಷುಲಕ ಕಾರಣಕ್ಕೆ ಜಗಳ ನಡೆದಿದೆ. ಇದರಿಂದ ನೊಂದ ಆಕೆ ಗಲಾಟೆ ಬಗ್ಗೆ ತನ್ನ ಸಹೋದರ ಸಿದ್ದನಗೌಡನಿಗೆ ಕರೆ ಮಾಡಿ ತಿಳಿಸಿದ್ದಾರೆ. ಇದರಿಂದ ಕೆರಳಿದ ಪತ್ನಿಯ ಸಹೋದರ ಸಿದ್ದನಗೌಡ ನಿನ್ನೆ ರಾತ್ರಿ ಭಾವನ ಜೊತೆಗೆ ಜಗಳ ಆರಂಭಿಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಆಕ್ರೋಶದಿಂದ ಸಿದ್ದನಗೌಡ, ಯೋಧನಿಗೆ ಚಾಕು ಇರಿದು ಕೊಲೆ ಗೈದಿದ್ದಾನೆ ಎನ್ನಲಾಗಿದೆ.
ಕಳೆದ ಎರಡು ವರ್ಷದ ಹಿಂದೆ ಕರಿಸಿದ್ದಪ್ಪ ಕಳಸದ ಪ್ರೀತಿ ಮಾಡಿ ವಿದ್ಯಾರನ್ನು ಮದುವೆಯಾಗಿದ್ದ. ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
PublicNext
12/08/2022 02:23 pm