ಗದಗ: ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯದ ಅಕ್ಕಿ ವಾಹನದ ಮೇಲೆ ದಾಳಿ ನಡೆಸಿರೋ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
24,360 ಕೆಜಿ ಯಷ್ಟು ಪಡಿತರ ಅಕ್ಕಿಯನ್ನ ನರಗುಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು 5,60,280 ರೂ ಮೌಲ್ಯದ 495 ಅಕ್ಕಿ ಮೂಟೆ ಪತ್ತೆಯಾಗಿವೆ.ಗದಗದಿಂದ ನರಗುಂದ ಮಾರ್ಗವಾಗಿ ಸೂರತ್ ನಗರಕ್ಕೆ ಪಡಿತರ ಅಕ್ಕಿಯನ್ನ ದಂಧೆಕೋರರು ಸಾಗಿಸುತ್ತಿದ್ದರು ಎನ್ನಲಾಗಿದೆ.
ವಾಹನ ಸಂಖ್ಯೆ ಜಿಜೆ-02,ಝಡ್-1926 ಸಂಖ್ಯೆಯ ಲಾರಿಯಲ್ಲಿ ಅನ್ನಭಾಗ್ಯದ ಅಕ್ಕಿಯನ್ನ ಪ್ರತಿ ಚೀಲದಲ್ಲಿಯೂ 50 ಕೆಜಿಯಂತೆ ಒಟ್ಟು 495 ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದರೆಂದು ತಿಳಿದು ಬಂದಿದೆ.
ಗದಗ ಎಸ್ಪಿ ಶಿವಪ್ರಕಾಶ ದೇವರಾಜು ಮಾರ್ಗದರ್ಶನದಲ್ಲಿ ನರಗುಂದ ಸಿಪಿಐ ಮಲ್ಲಯ್ಯ ಮಠಪತಿ ಹಾಗೂ ಆಹಾರ ನೀರಿಕ್ಷಕರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಲಾರಿ ಚಾಲಕ ರಾಜಸ್ಥಾನದ ರಮೇಶ ಆಹಾರಿ ಹಾಗೂ ಕಿನ್ನರ ದುರ್ಗೇಶ ಆಹಾರಿ ಅನ್ನೋರನ್ನ ಪೊಲೀಸರು ವಶಕ್ಕೆ ಪಡೆದಿದ್ದು ಕಲಂ 420 ಐಪಿಸಿ ಮತ್ತು ಕಲಂ 3 & 7 ಇ.ಸಿ.ಯಾಕ್ಟ್ ಪ್ರಕಾರ ಕಲಂ 18 ಪಿ.ಡಿ.ಎಸ್.ಕಂಟ್ರೋಲಿಂಗ್ ಆರ್ಡರ್ ಆ್ಯಕ್ಟ್ 1992 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
PublicNext
04/08/2022 09:28 pm