ಗದಗ: ಯುವತಿ ವೇಲ್ ಧರಿಸಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ಬಳಿಕ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಪ್ರಮೋದ ಜಾಲಣ್ಣವರ ಎಂಬಾತ ಆತ್ಮಹತ್ಯೆಗೆ ಶರಣಾದ ಯುವಕ. ಈತ ಹಲವು ದಿನಗಳಿಂದ ಭುವನೇಶ್ವರಿ ಎಂಬ ಯುವತಿಯನ್ನು ಪ್ರೀತಿಸ್ತಾ ಇದ್ದನಂತೆ. ಇಬ್ಬರೂ ಗದಗ ಜಿಲ್ಲೆಯ ಮುಳಗುಂದದಲ್ಲಿ ಪಿಯುಸಿ ಓದುತ್ತಿದ್ದರು. ಫ್ರೆಂಡ್‌ಶಿಪ್ ಡೇ ಅಂಗವಾಗಿ ಪ್ರಿಯತಮ ಕೊಡಿಸಿದ ಚುಡಿದಾರ್ ಧರಿಸಿದ್ದ ಯುವತಿ ಅದರ ವೇಲ್ ಧರಿಸಿರಲಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಇದರಿಂದ ಮನನೊಂದ ಯುವಕ ಪ್ರಮೋದ ಜಾಲಣ್ಣವರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇತ್ತ ಪ್ರೀತಿಸಿದ ಯುವಕನ ಸಾವಿನ ಸುದ್ದಿ ಕೇಳಿ ಯುವತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಯುವತಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಆಕೆಯೂ ಮೃತಪಟ್ಟಿದ್ದಾಳೆ. ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
01/08/2022 02:16 pm