ಕೊರಟಗೆರೆ: ಕಲ್ಯಾಣಿ ಬಿದ್ದು ಗೃಹಿಣಿಯೊಬ್ಬಳು ಮೃತಪಟ್ಟಿರುವ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ನೀಲಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
26 ವರ್ಷದ ಸುಶ್ಮಿತಾ ಮೃತ ದುರ್ದೈವಿಯಾಗಿದ್ದು ಕಳೆದ ಆರು ವರ್ಷದ ಹಿಂದೆ ನಾಗೇಶ್ ಎನ್ನುವ ಯುವಕರೊಂದಿಗೆ ಮದುವೆಯಾಗಿತ್ತು. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಐದು ವರ್ಷದ ಮುದ್ದಾದ ಮಗು ಕೂಡ ಇದೆ.
ಆದರೆ ನಿರಂತರವಾಗಿ ಯುವತಿಯ ಮೇಲೆ ವರದಕ್ಷಿಣೆ ಕಿರುಕುಳವನ್ನು ಪತಿ ನಾಗೇಶ್ ಮತ್ತು ಪೋಷಕರಾದ ರಾಮಕೃಷ್ಣಯ್ಯ ಮತ್ತು ಶಾರದಾ ನೀಡುತ್ತಾ ಬಂದಿದ್ದು ಶನಿವಾರ ಯುವತಿಯನ್ನು ಹೊಡೆದು ಸಾಯಿಸಿದ್ದಾರೆ ನಂತರ ಕಲ್ಯಾಣಿಗೆ ಹಾಕಿದ್ದಾರೆ ಎಂದು ಮೃತ ಸುಶ್ಮಿತಾ ಪಾಲಕರು ಆರೋಪಿಸಿದ್ದಾರೆ.
ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ ಅವಳ ಸಾವಿಗೆ ಆಕೆಯ ಗಂಡನ ಮನೆಯಲ್ಲಿ ನೀಡುತ್ತಿದ್ದ ವರದಕ್ಷಿಣೆ ಕಿರುಕುಳವೇ ಕಾರಣ. ನಮ್ಮ ಮಗಳಿಗೆ ಹಿಂಸೆ ನೀಡಿದ ಸುಶ್ಮಿತಾ ಪತಿ ನಾಗೇಶ್ ಮತ್ತು ಅವರ ಪೋಷಕರನ್ನು ಬಂಧಿಸಬೇಕು ಎಂದು ಮೃತಳ ಪೋಷಕರು ಮತ್ತು ಸಂಬಂಧಿಕರು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಮುಂದೆ ಕೆಲಕಾಲ ಪ್ರತಿಭಟಿಸಿದರು.
ಈ ಕುರಿತು ಕೋಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಪಿಐ ಸಿದ್ದರಾಮೇಶ್ವರ ಮತ್ತು ಪಿಎಸ್ ಐ ಮಹಾಲಕ್ಷ್ಮಮ್ಮ ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ತನಿಖೆ ನಡೆಸುವಂತೆ ಡಿವೈಎಸ್ಪಿ ಆದೇಶಿಸಿದ್ದ ಪ್ರಕರಣ ತಾಲೂಕಿನಾದ್ಯಂತ ಸಂಚಲನವನ್ನು ಮೂಡಿಸಿದೆ.
ಮೃತ ಸುಶ್ಮಿತಾ ಅಣ್ಣ ಶಂಕರ ದೂರಿನ ಮೇರೆಗೆ ಸುಶ್ಮಿತಾ ಗಂಡ ನಾಗೇಶ ,ಮಾವ ರಾಮಕೃಷ್ಣಯ್ಯ,ಅತ್ತೆ ಶಾರದಮ್ಮ ವಿರುದ್ಧ ಕಲಂಗಳು: 498 (A), 302,304 (B),R/W 34 IPC and 3&4 DP act ಕೇಸ್ ದಾಖಲಾಗಿದೆ.
PublicNext
25/07/2022 09:43 am