ಗದಗ : ಸೆಲ್ಫಿ ವೀಡಿಯೋ ಮಾಡಿ ನದಿಗೆ ಹಾರಿದ ಯುವಕನ ಶವ ಎರಡು ದಿನಗಳ ಬಳಿಕ ಕಕ್ಕೂರು ಗ್ರಾಮದಲ್ಲಿ ಪತ್ತೆಯಾಗಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬ್ರಿಡ್ಜ್ ನಿಂದ ಹಾರಿದ್ದ ಯುವಕ ತುಂಗಭದ್ರಾ ನದಿಯಲ್ಲಿ ನಾಪತ್ತೆಯಾಗಿದ್ದ ಎರಡು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದೆ.
ಇನ್ನು ವಿಶ್ವನಾಥ ಗಾಣಾಚಾರಿ ( 26) ಸೆಲ್ಫಿ ವಿಡಿಯೋ ಮಾಡಿ ಜುಲೈ 20 ರಂದು ಮಧ್ಯಾಹ್ನ ನದಿಗೆ ಹಾರಿದ್ದ. ಹಾರಿದ ಜಾಗದಿಂದ 10 ಕಿಲೋ ಮೀಟರ ದೂರದ ನದಿ ತಿರುವಿನ ಪೊದೆಯಲ್ಲಿ ಸಿಲುಕಿದ್ದ ವಿಶ್ವನಾಥ ಶವವನ್ನು ಮೀನುಗಾರರು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮುಂಡರಗಿ ತಾಲೂಕಾಸ್ಪತ್ರೆಗೆ ರವಾನೆ ಮಾಡಲಾಗಿದೆ.
PublicNext
23/07/2022 11:43 am