ಹೈದರಾಬಾದ್: ತಾವು ಅಪ್ಲೋಡ್ ಮಾಡಿದ ವಿಡಿಯೋಗಳು ಮೊದಲ ದಿನದಲ್ಲೇ ಲಕ್ಷಾಂತರ ವೀಕ್ಷಣೆ ಗಳಿಸಬೇಕು ಎಂದು ಉದಯೋನ್ಮುಖ ಯೂಟ್ಯೂಬರ್‌ಗಳು ಹವಣಿಸುತ್ತಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ವೀಕ್ಷಣೆಗಳನ್ನು ಪಡೆಯದಿದ್ದರೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಹೀಗೆ ಕುಗ್ಗಿ ಹೋಗಿದ್ದ ಯೂಟ್ಯೂಬರ್ ಒಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ದೀನಾ (24) ಮೃತ ಯೂಟ್ಯೂಬರ್. ಈತ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಸೆಲ್ಫ್ಪ್ಲೋ ಹೆಸರಿನಲ್ಲಿ ಗೇಮಿಂಗ್ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಸುಮಾರು ವಿಡಿಯೋಗಳನ್ನು ಅಪ್ಲೋಡ್ ಮಾಡಿದರೂ ವೀಕ್ಷಣೆ ಸಿಗಲಾರದ ಕಾರಣ ದೀನಾ ಐದು ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೀಕ್ಷಣೆ ದೊರೆಯದಿರುವ ಬಗ್ಗೆ ಈತ ಬೇಸರಿಸಿಕೊಂಡು ವಿಡಿಯೋ ಮಾಡಿದ್ದ ಈತ ಅದನ್ನೂ ಯೂಟ್ಯೂಬ್‌ಗೆ ಹಾಕಿದ್ದ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಸೈದಾಬಾದ್ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದ ಮರಣೋತ್ತರ ಪರೀಕ್ಷೆಗೆ ಒಸ್ಮಾನಿಯ ಶವಾಗಾರಕ್ಕೆ ರವಾನಿಸಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್ನೋಟ್ ಸಹ ಪತ್ತೆಯಾಗಿದೆ. ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
PublicNext
22/07/2022 08:28 pm