ಬೆಳಗಾವಿ: ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ ಪ್ರೇಯಸಿ, ಇದು ಕೆಟ್ಟ ಕನಸು. ಇನ್ನು ಮುಂದೆ ನನ್ನ- ನಿನ್ನ ನಡುವೆ ಏನೂ ಇಲ್ಲ. ನನ್ನಿಂದ ದೂರ ಇರು ಎಂದಿದ್ದಕ್ಕೆ ಕುಪಿತಗೊಂಡ ಪ್ರಿಯತಮ, ಆಕೆಯನ್ನೇ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗಾವಿ ನಗರದ ಬಸವ ಕಾಲೊನಿಯಲ್ಲಿ ನಡೆದಿದೆ.
ಸವದತ್ತಿ ತಾಲೂಕಿನ ರಾಮಚಂದ್ರ ಬಸಪ್ಪ ತೇಣಗಿ (29) ರಾಣಿ ಚನ್ನಮ್ಮ ವಿವಿಯಲ್ಲಿ ಎಂಎ ಕಲಿಯುತ್ತಿದ್ದ. ಕೊಲೆಯಾದ ರೇಣುಕಾ ಕೆಂಚಪ್ಪ ಪಂಚಣ್ಣವರ (30) ಕೆಎಲ್ಇ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.
ಅದೇನಾಯ್ತೋ ಒಂದು ದಿನ ರೇಣುಕಾ, "ಇದೊಂದು ಕೆಟ್ಟ ಕನಸು. ನನ್ನನ್ನು ಮರೆತು ಬಿಡು" ಎಂದಿದ್ದಳು. ಹಾಗಾಗಿ ಆಕ್ರೋಶಗೊಂಡ ಯುವಕ, ಯುವತಿಯನ್ನು ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದೆ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ. ಯುವಕ ಆತ್ಮಹತ್ಯೆಗೈದ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಎಪಿಎಂಸಿ ಪೊಲೀಸರು ಶವವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
22/07/2022 01:15 pm