ಕೋಲಾರ: KRS ಪಕ್ಷದವರು ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕೆ ಡ್ರೈವಿಂಗ್ ಸ್ಕೂಲ್ ದಲ್ಲಾಳಿಗಳು ಹಲ್ಲೆ ನಡೆಸಿರುವ ಘಟನೆ ಕೋಲಾರದ RTO ಕಚೇರಿಯಲ್ಲಿ ನಡೆದಿದೆ.
KRS ಪಕ್ಷದ ಮುಳಬಾಗಿಲು ತಾಲ್ಲೂಕಿನ ಯುವ ಘಟಕ ಅಧ್ಯಕ್ಷ ಗಣೇಶ್, ಆನಂದ್, ಮಹೇಶ್ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಜಿಲ್ಲಾಧ್ಯಕ್ಷೆ ಇಂದಿರಾ ರೆಡ್ಡಿ ಅವರ ಮೇಲೂ ಹಲ್ಲೆಗೆ ಮುಂದಾಗಿದ್ದರು.
RTO ಕಚೇರಿಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಪ್ರಶ್ನೆ ಮಾಡಿ,ವೀಡಿಯೋ ಮಾಡಿದ್ದಕ್ಕೆ ಸಿಟ್ಟಾದ ದಲ್ಲಾಳಿಗಳು ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
20/07/2022 08:55 pm