ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಅಕ್ರಮ‌ ಸಂಬಂಧಕ್ಕೆ ಅಡ್ಡಿಯಾದ ಪತಿಯ ಕಥೆ ಮುಗಿಸಿದ ಪತ್ನಿ!

ಕಲಬುರಗಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂದು ಪತ್ನಿಯೇ ಪತಿಯನ್ನು ಕೊಲೆ ಮಾಡಿಸಿದ ಘಟನೆ ಅಫಜಲಪುರ ತಾಲೂಕಿನಲ್ಲಿ ಎರಡು ತಿಂಗಳ ಹಿಂದೆ ನಡೆದಿದ್ದು, ಸದ್ಯ ಪಾಪಿಗಳ ಕೃತ್ಯ ಬಯಲಿಗೆ ಬಂದಿದೆ.

ಗುರಪ್ಪ ಕೊಲೆಯಾದ ವ್ಯಕ್ತಿ. ಗುರಪ್ಪನ ಪತ್ನಿ ಮಹಾದೇವಿ, ಸಂತೋಷ್ ಬಿರಾದಾರ್, ಸತೀಶ್​ನನ್ನು ಬಂಧಿತ ಆರೋಪಿಗಳು. ಮೇ 15ರಂದು ಜಿಲ್ಲೆಯ ಅಫಜಲಪುರ ತಾಲೂಕಿನ ಕೇಶ್ವಾಪುರ ಗ್ರಾಮದ ಬಳಿ ಜಮೀನುವೊಂದರಲ್ಲಿ ಗುರಪ್ಪನ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಷ್ಟೇ ಅಲ್ಲದೆ ಪತ್ನಿಯ ವಿರುದ್ಧವೇ ಕುಟುಂಬಸ್ಥರು ಶಂಕಿಸಿದ್ದರು. ಆದರೆ ಈ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.

ಕೊಲೆಯಾದ ಗುರುಪ್ಪನ ಸ್ನೇಹಿತ ಸಂತೋಷ್ ಎಂಬಾತನ ಆರೋಪಿ ಮಹಾದೇವಿ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನು ಪ್ರಶ್ನಿಸುತ್ತಿದ್ದ ಪತಿಯೊಂದಿಗೆ ಮಹಾದೇವಿ ಜಗಳವಾಡುತ್ತಿದ್ದಳು. ಇದರಿಂದ ಬೇಸತ್ತ ಮಹಾದೇವಿ ಪತಿ ಗುರುಪ್ಪನನ್ನು ಮುಗಿಸಲು ಪ್ರಿಯಕರ ಸಂತೋಷ್‌ ಜೊತೆಗೂಡಿ ಸ್ಕೆಚ್​ ಹಾಕಿದ್ದಳು.

ಅದರಂತೆ ಮೇ 15ರಂದು ಗುರುಪ್ಪನನ್ನು ಜೇವರ್ಗಿಯಿಂದ ಫರಹತಾಬಾದ್ ಕಡೆಗೆ ಕರೆತಂದು ಮಾರಕಾಸ್ತ್ರಗಳಿಂದ ಕೊಲೆ ಮಾಡಿ, ನಂತರ ಶವವನ್ನು ಅಫಜಲಪುರ ತಾಲೂಕಿನ ಕೇಶ್ವಾಪುರ ಗ್ರಾಮದ ಜಮೀನೊಂದರಲ್ಲಿ ಬಿಸಾಡಲಾಗಿತ್ತು. ಮೇ 15 ರಂದು ಶವ ಪೊಲೀಸರು ಶವ ಪತ್ತೆ ಮಾಡಿದ್ದರು. ಆದರೆ, ಅದು ಗುರುಪ್ಪ ಎಂದು ಗುರುತು ಸಿಕ್ಕಿರಲಿಲ್ಲ. ಜೂನ್ 5ರಂದು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಗುರುಪ್ಪನ ಕುಟುಂಬಸ್ಥರು ಕೇಸ್​ ದಾಖಲಿಸಿದ್ದರು.

ಈ ಬಗ್ಗೆ ಅಫಜಲಪುರ ಠಾಣೆ ಪೊಲೀಸರು ಕೇಶ್ವಾಪುರ ಬಳಿ ಶವ ಪತ್ತೆಯಾಗಿದ್ದರ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಕುಟುಂಬಸ್ಥರಿಗೆ ಶವದ ಫೋಟೊ ತೋರಿಸಿದಾಗ ಇದು ಗುರಪ್ಪ ಎಂದು ಗುರುತಿಸಿದ್ದಾರೆ. ಬಳಿಕ ಪತ್ನಿ ಮಹಾದೇವಿಯೇ ಕೊಲೆ ಮಾಡಿಸಿದ್ದಾಳೆ ಎಂದು ದೂರು ನೀಡಿದ್ದರು. ಬಳಿಕ ಮಹಾದೇವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂತೋಷ್ ಮತ್ತು ಸತೀಶ್​ ಜೊತೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

Edited By : Vijay Kumar
PublicNext

PublicNext

18/07/2022 04:13 pm

Cinque Terre

31.15 K

Cinque Terre

0