ವರದಿ: ರಾಘವೇಂದ್ರ ದಾಸರಹಳ್ಳಿ
ಮಧುಗಿರಿ: ಹಾಸ್ಟೆಲ್‌ನಲ್ಲಿ ವಾರ್ಡನ್ ಆಗಿರುವುದು ಪತ್ನಿ. ಆದರೆ ಇಲ್ಲಿ ವಾರ್ಡನ್ ರೀತಿ ದರ್ಬಾರ್ ಮಾಡುತ್ತಿರುವುದು ಪತಿ. ವಿದ್ಯಾರ್ಥಿನಿಯರು ಇರುವ ಬಾಲಕರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ತಾನೇ ವಾರ್ಡನ್ ರೀತಿ ವರ್ತಿಸಿ ವಿದ್ಯಾರ್ಥಿನಿಯರಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಘಟನೆ ಮಧುಗಿರಿ ಪಟ್ಟಣದಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂತಹ ನಿವೇದಿತಾ ಅವರ ಪತಿ ರಂಗನಾಥ್ ಎಲ್ಲಾ ವಿಚಾರಗಳಿಗೂ ಹಸ್ತಕ್ಷೇಪ ಮಾಡುತ್ತಾ ವಿದ್ಯಾರ್ಥಿನಿಯರಿಗೆ ಮತ್ತು ಸಿಬ್ಬಂದಿಗೆ ಮಾನಸಿಕ ಕಿರುಕುಳವನ್ನು ನೀಡುತ್ತ ತಾನೇ ವಾರ್ಡನ್ ರೀತಿ ಮಾಡುತ್ತಿರುವ ಆರೋಪವಿತ್ತು.
ಆರೋಪದ ಹಿನ್ನೆಲೆಯಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ವಿಚಾರಣೆ ನಡೆಸುವ ವೇಳೆ ವಾರ್ಡನ್ ಪತಿ ಹಾಸ್ಟೆಲ್‌ಗೆ ಅತಿಕ್ರಮ ಪ್ರವೇಶ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ವಿಡಿಯೋ ಆಧಾರದ ಮೇಲೆ ಮತ್ತು ಹಾಸ್ಟೆಲ್ ಗೆ ಅತಿಕ್ರಮ ಪ್ರವೇಶ ಮಾಡಿರುವುದಕ್ಕೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ರಾಮಣ್ಣ ವಾರ್ಡನ್ ಪತಿ ರಂಗನಾಥ್ ಅವರ ವಿರುದ್ಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
15/07/2022 12:59 pm