ಪಾವಗಡ: ತಾಲೂಕಿನ ಕ್ಯಾತಗಾನಹಳ್ಳಿ ಬಳಿ ಬುಧವಾರ ಸಂಜೆ ಸ್ನೇಹಿತರೊಂದಿಗೆ ನೇರಳೆ ಮರಕ್ಕೆ ಹಣ್ಣು ಕೀಳಲು ಹತ್ತಿ ಕಾಲು ಜಾರಿ ಬಿದ್ದು ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದಾನೆ.
9ನೇ ತರಗತಿ ವಿದ್ಯಾರ್ಥಿ 14ವರ್ಷದ ನರೇಶ್ ಮೃತ ದುರ್ದೈವಿ. ಶಾಲೆಯಿಂದ ವಿದ್ಯಾರ್ಥಿ ಮನೆಗೆ ಮರಳುವ ದುರ್ಘಟನೆ ಸಂಭವಿಸಿದ್ದು ಬಿಇಓ ಅಶ್ವತ ಕುಮಾರ್, ಇಸಿಓ ಶಿವಕುಮಾರ್ ಮತ್ತು ಇತರ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೃತ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು ಇಲಾಕ ಹಂತದಲ್ಲಿ ಪರಿಹಾರ ಕೊಡಿಸುವ ಭರವಸೆ ನೀಡಿದರು. ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
15/07/2022 11:44 am