ರಾಂಚಿ: ಪ್ರೀತಿಗೆ ಅಡ್ಡ ಬಂದ ತಂದೆಯನ್ನೇ ಕೊಲೆಗೈದ 20 ವರ್ಷದ ಪುತ್ರಿ ಹಾಗೂ ಆಕೆಯ ಗೆಳೆಯನನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದು, ಪಾಪಿಗಳ ಕೃತ್ಯವನ್ನು ಬಯಲಿಗೆ ಎಳೆದಿದ್ದಾರೆ.
ಜೂನ್ 29ರಂದು ಜಾರ್ಖಂಡ್ ನ ಸೆಕರೈಲ ಕಸ್ವರ್ನ್ ಜಿಲ್ಲೆಯ ಉದ್ಯಮಿ ಕನ್ಹಯ್ಯ ಸಿಂಗ್ ಅನ್ನುವವರನ್ನು ಅಪರಿಚಿತರು ಗುಂಡು ಹೊಡೆದು ಸಾಯಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಆದರೆ ಕೊಲೆಗಾರರನ್ನು ಹಿಡಿಯೋದು ಸುಲಭವಿರಲಿಲ್ಲ. ಉದ್ಯಮಿ ಕನ್ಹಯ್ಯ ಸಿಂಗ್ ಅವರಿಗೆ ಶತ್ರುಗಳು ಇರಲಿಲ್ಲ, ಜೊತೆಗೆ ಯಾವುದೇ ವ್ಯವಹಾರ ವ್ಯಾಜ್ಯಗಳಿರಲಿಲ್ಲ. ಹೀಗಾಗಿ ಕೊಲೆಯಾಕಾಯ್ತು ಅನ್ನುವ ಸುಳಿವೇ ಇರಲಿಲ್ಲ. ಹೀಗಾಗಿ ಮಗಳು ಅಪರ್ಣಾ ಸಿಂಗ್ ಮೇಲೆಯೇ ಅನುಮಾನ ಬಂದಿದ್ದು, ತನಿಖೆಯನ್ನು ಆಕೆಯ ಮೇಲೆ ಕೇಂದ್ರಿಕರಿಸಿದಾಗ ಮರ್ಡರ್ ಮಿಸ್ಟರಿ ಬಿಚ್ಚಿಕೊಳ್ಳತೊಡಗಿತು.
ಅಪರ್ಣಾ ಸಿಂಗ್ ಕಳೆದ 5 ವರ್ಷಗಳಿಂದ ರಾಜ್‌ವೀರ್ ಸಿಂಗ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಈ ಸಂಬಂಧ ಕನ್ಹಯ್ಯ ಸಿಂಗ್‌ಗೆ ಇಷ್ಟವಿರಲಿಲ್ಲ. ಹೀಗಾಗಿ ರಾಜ್‌ವೀರ್ ಸಿಂಗ್ ಮನೆ ಬಳಿ ಹೋಗಿದ್ದ ಕನ್ಹಯ್ಯ ಸಿಂಗ್, ಮಗಳ ಹಿಂದೆ ಬೀಳದಂತೆ ಎಚ್ಚರಿಕೆ ನೀಡಿದ್ದ. ಮಾತ್ರವಲ್ಲದೆ ಪಿಸ್ತೂಲ್ ತೋರಿಸಿ ಮನೆಯವರನ್ನೂ ಬೆದರಿಸಿದ್ದ. ಕನ್ಹಯ್ಯ ಸಿಂಗ್ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ರಾಜ್ ವೀರ್ ಸಿಂಗ್ ಕುಟುಂಬ ತಮ್ಮ ವಾಸ ಸ್ಥಳವನ್ನೂ ಬದಲಾಯಿಸಿದ್ದರು. ತಮ್ಮ ಸ್ವಂತ ಆಸ್ತಿಯನ್ನು ಮಾರಿ ಬಾಡಿಗೆ ಮನೆ ಸೇರಿಕೊಂಡಿದ್ದರು. ಈ ನಡುವೆ ಮಗಳಿಗೆ ಬೇರೆ ಮದುವೆ ಮಾಡಿಸಲು ಕನ್ಹಯ್ಯ ಸಿಂಗ್ ಸಿದ್ದತೆ ಮಾಡಿಕೊಳ್ಳತೊಡಗಿದೆ.
ಹೀಗೆ ಬಿಟ್ಟರೆ ಪ್ರೀತಿ ಕುತ್ತು ಎಂದು ಅರಿತ ಅಪರ್ಣಾ ಸಿಂಗ್ ಮತ್ತು ರಾಜ್‌ವೀರ್ ಸಿಂಗ್ ಇಬ್ಬರೂ ಸೇರಿ ಕನ್ಹಯ್ಯ ಸಿಂಗ್‌ನನ್ನೇ ಮುಗಿಸಲು ನಿರ್ಧರಿಸಿದರು. ಈ ಸಲುವಾಗಿ ರಾಜ್‌ವೀರ್ ಸಿಂಗ್ ಶೂಟರ್ ನಿಖಿಲ್ ಗುಪ್ತ ಎಂಬುವನನ್ನು ಸಂಪರ್ಕಿಸಿ 8,500 ರೂಪಾಯಿ ಕೊಟ್ಟು ಬಿಹಾರದಿಂದ ಕಂಟ್ರಿ ಮೇಡ್ ಪಿಸ್ತೂಲ್ ಬೇರೆ ತರಿಸಿಕೊಂಡಿದ್ದ. ಅಂದ ಹಾಗೇ ಈ ಎಲ್ಲಾ ಪ್ಲಾನ್ ಗಳು ನಡೆದದ್ದು ಮೂರು ವರ್ಷಗಳ ಹಿಂದೆ, ಆದರೆ ಜಾರಿಯಾಗಿದ್ದು ಜೂನ್ 29 ರಂದು.
ಇನ್ನು ಕೊಲೆ ಸಲುವಾಗಿ ಶೂಟರ್ ನಿಖಿಲ್ ಗುಪ್ತಗೆ 4 ಸಾವಿರ ರೂಪಾಯಿ ನಗದು ಹಾಗೂ ಒಂದು ವಜ್ರದ ಉಂಗುರವನ್ನು ಸುಪಾರಿಯಾಗಿ ಪಡೆದುಕೊಂಡಿದ್ದ. ಈ ವಜ್ರದ ಉಂಗುರವನ್ನು ಕನ್ಹಯ್ಯ ಸಿಂಗ್ ಮಗಳು ಅಪರ್ಣಾ ಸಿಂಗ್ ಗೆ ಗಿಫ್ಟ್ ಆಗಿ ಕೊಟ್ಟಿದ್ದನಂತೆ.
PublicNext
09/07/2022 08:27 am