ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PDO ಜೊತೆ ಗ್ರಾ.ಪಂ ಸದಸ್ಯನ ಅನುಚಿತ ವರ್ತನೆ : ವಿಡಿಯೋ ವೈರಲ್

ತುಮಕೂರು : ಗ್ರಾಮಪಂಚಾಯ್ತಿ ಕಚೇರಿಯಲ್ಲಿ ಗ್ರಾ.ಪಂ ಸದಸ್ಯ ಪಿಡಿಓ ಜೊತೆ ಅನುಚಿತವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದೆ.

ಹೌದು ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆಸಿ ಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗ್ರಾಪಂ ಸದಸ್ಯನೊಬ್ಬ ಪಿಡಿಓ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಚಿವ ಮಾಧುಸ್ವಾಮಿ ಬೆಂಬಲಿಗ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಗ್ರಾಪಂ ಸದಸ್ಯ ಪ್ರಸನ್ನ ಕುಮಾರ್, ಜೆಸಿ ಪುರ ಪಿಡಿಓಗೆ ಗ್ರಾಪಂ ಕಚೇರಿಯಲ್ಲೇ ಅನುಚಿತವಾಗಿ ವರ್ತನೆ ತೊರಿದ್ದಾನೆ. ಪದೇ ಪದೇ ಪಿಡಿಓ ಬಳಿ ಹೋಗಿ ಹಿಡಿದುಕೊಳ್ಳಲು ಪ್ರಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಆ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.

ಪಿಡಿಓ ಕೋಮಲ ಅವರ ಬಳಿಗೆ ಹೋದ ಸದಸ್ಯ ಅವರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ ಕುಮಾರ್ ಸದಸ್ಯತ್ವ ರದ್ದು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Manjunath H D
PublicNext

PublicNext

03/07/2022 04:54 pm

Cinque Terre

128.82 K

Cinque Terre

24