ಕೇರಳ: ನಾಯಿ ಕಚ್ಚಿ ರೇಬಿಸ್ ಕಾಯಿಲೆ ಒಳಗಾಗಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಕೇರಳದ ಪಾಲಕ್ಕಾಡ್ ನಡೆದಿದೆ.
ಶ್ರೀ ಲಕ್ಷ್ಮೀ (18) ಮೃತ ವಿದ್ಯಾರ್ಥಿನಿ. ಶ್ರೀ ಲಕ್ಷ್ಮೀ ಪಲಕ್ಕಾಡ್ ಮೂಲದ ಸುಗುನನ್ ಮತ್ತು ಸಿಂಧು ದಂಪತಿಯ ಪುತ್ರಿ. ಮೇ 30ರ ಬೆಳಗ್ಗೆ ಶ್ರೀಲಕ್ಷ್ಮೀ ಅವರು ಕಾಲೇಜಿಗೆ ಹೋಗುತ್ತಿದ್ದಾಗ ಪಕ್ಕದ ಮನೆಯ ನಾಯಿ ಆಕೆಗೆ ಕಚ್ಚಿತ್ತು. ತಕ್ಷಣವೇ ಯುವತಿ ಆರೋಗ್ಯ ಇಲಾಖೆ ಸೂಚಿಸಿದಂತೆ ಲಸಿಕೆಯನ್ನೂ ಪಡೆದುಕೊಂಡಿದ್ದರು. ಆ ಬಳಿಕ ಕೆಲವು ದಿನಗಳಿಂದ ಯಾವುದೇ ರೀತಿಯ ಅನಾರೋಗ್ಯದ ಲಕ್ಷಣಗಳು ಕಂಡು ಬಂದಿರಲಿಲ್ಲ. ಆದರೆ ಇತ್ತೀಚೆಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಯುವತಿಯನ್ನು ಪರೀಕ್ಷಿಸಿದಾಗ ರೇಬೀಸ್ ಕಾಯಿಲೆಯ ಲಕ್ಷಣಗಳು ಇರುವುದು ಕಂಡುಬಂದಿತ್ತು.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಲಕ್ಷಣಗಳು ಹೆಚ್ಚಾಗಿದ್ದರಿಂದ ತಕ್ಷಣವೇ ಆಕೆಯನ್ನು ತ್ರಿಸ್ಸೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
PublicNext
01/07/2022 02:20 pm