ತುಮಕೂರು: ಯುವಕರೇ ಇವರ ಟಾರ್ಗೆಟ್. ಯುವತಿಯರು ಇವರ ಕಥೆ ಬೇರೆನೆ ಬಿಡಿ. ಕೆಲಸ ಕೊಡ್ತಿವಿ ಬನ್ನಿ ಅಂತ CLY ಹೆಸರಲ್ಲಿ ಫೇಸ್ ಬುಕ್‌ನಲ್ಲಿ ಜಾಹೀರಾತು ನೀಡ್ತಾರೆ. ಹಾಗೆ ಬಂದವ್ರ ಬಳಿ ನೋಂದಣಿ ದುಡ್ಡು ಅಂತಲೇ 2,500 ರೂಪಾಯಿ ಕೂಡ ಕಿತ್ತುಕೊಳ್ತಾರೆ. ಅದಾದ್ಮಲೆ ಇವರ ಅಸಲಿ ಆಟ ಶುರು.
ಇಂತಹ ಒಂದು ಗ್ಯಾಂಗ್ ತುಮೂರಿನಲ್ಲಿ ಈಗ ಆಕ್ಟಿವ್ ಆಗಿದೆ. ಇವರ ಬಲೆಗೆ ಈಗಾಗಲೇ ಅನೇಕ ಯುವಕ-ಯುವತಿ ಬಿದ್ದಾಗಿದೆ. ಹೌದು. ತುಮಕೂರಿನ ಊರುಕೆರೆ ಬಳಿಯ ಸ್ವರ್ಣ ಅಪಾರ್ಟ್‌ಮೆಂಟ್ ಇವರು ಮನೆ ಬಾಡಿಗೆ ಪಡೆದಿದ್ದಾರೆ. ಇದೇ ಮನೆಗೆ ಯುವಕ-ಯವತಿಯರುನ್ನ ಕರೆಸುತ್ತಾರೆ ಈ ಖದೀಮರು.
ಇಲ್ಲಿಂದ ಎರಡ್ಮೂರು ದಿನ ಟ್ರೈನಿಂಗ್ ಅಂತಲೇ ಕಳ್ಳಾಟ ಆಡ್ತಾರೆ. ಬಳಿಕ ಚೈನ್ ಸಿಸ್ಟಂ ಜಾಬ್ ಇದು. ನಿಮ್ಮಂತೇನೆ ಎಷ್ಟು ಜನರನ್ನ ಕರೆದು ತರ್ತಿರೋ ಅಷ್ಟು ನಿಮಗೆ ಲಾಭ ಅಂತಲೇ ಹೇಳ್ತಾರಂತೆ. ಯವತಿಯರನ್ನ ಲೈಂಗಿಕವಾಗಿಯೂ ಬಳಿಕೊಂಡು ಅವರ ವೀಡಿಯೋ ಸೆರೆಹಿಡಿದು ಬ್ಲಾಕ್ ಮೇಲೆ ಕೂಡ ಮಾಡಿದ್ದಾರಂತೆ.
ಆದರೆ, ಇವರಲ್ಲಿಯೇ ಕೆಲ ಯುವಕರು ಧೈರ್ಯ ಮಾಡಿ,ತುಮಕೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಇದರ ಪರಿಣಾಮ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿದ್ದಾರೆ. ಮೂವರನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
PublicNext
29/06/2022 01:10 pm