ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೀತಿಸಿದವಳಿಗಾಗಿ ವಿಷ ಕುಡಿದು ಪ್ರಾಣ ಬಿಟ್ಟ ಹಾಸನದ ಯುವ ಪ್ರೇಮಿ !

ಹಾಸನ: ಪ್ರೀತಿಸಿದ ಹುಡುಗಿ ಮೋಸ ಮಾಡಿದಳು. ಅವಳಿಗಾಗಿ ನಾನು ಎಲ್ಲವನ್ನೂ ದೂರ ಮಾಡಿದೆ. ಆಕೆ ನನಗೆ ಮೋಸ ಮಾಡಿದಳು ಎಂದು ಯುವಕ ವೀಡಿಯೋ ಮಾಡಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಸಿಕೆರೆಯಲ್ಲಿ ನಡೆದಿದೆ.

ಮೃತ ಯುವಕನನ್ನ ದಿಲೀಪ್ ಎಂದು ಗುರುತಿಸಲಾಗಿದೆ. ದಿಲೀಪ್ ಮತ್ತು ಫ್ಯಾಮಿಲಿ ಬೆಂಗಳೂರಿನಲ್ಲಿಯೇ ವಾಸವಾಗಿತ್ತು. ಇಲ್ಲಿಯೇ ಈ ಕುಟುಂಬ ಗಾರ್ಮೆಂಟ್ಸ್‌ನಲ್ಲಿಯೇ ಕೆಲಸ ಕೂಡ ಮಾಡುತ್ತಿತ್ತು.

ಇದೇ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬೆಟ್ಟದಕೂರ್ಲಿ ಗ್ರಾಮದ ಯುವತಿಯನ್ನ ದಿಲೀಪ್ ಪ್ರೀತಿಸುತ್ತಿದ್ದನು. ಕೆಲವು ವರ್ಷದಿಂದ ಇಬ್ಬರೂ ಪರಸ್ಪರ ಪ್ರೀತಿಸಿದ್ದಾರೆ.

ಆದರೆ, ಯುವತಿ ಮನೆಯವರ ಕಾರಣ ಹೇಳಿ ಪ್ರೀತಿಸುವುದೇ ಇಲ್ಲ ಎಂದು ಹೇಳಿ ಬಿಟ್ಟಿದ್ದಾಳೆ. ಇದಕ್ಕೆ ನೊಂದುಕೊಡ ದಿಲೀಪ್ ವಿಷಯ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆದರೆ, ದಿಲೀಪ್ ಸಾಯುವ ಮುನ್ನ ಒಂದು ವೀಡಿಯೋ ಕೂಡ ಮಾಡಿದ್ದಾನೆ. ಯುವತಿಯ ಹೆಸರು ಕೂಡ ಹೇಳಿದ್ದಾನೆ. ಈಕೆ ನನಗೆ ಮೋಸ ಮಾಡಿಳು ಅಂತಲೂ ಹೇಳಿದ್ದಾನೆ. ತನ್ನ ಸಾವಿಗೆ ಈ ಯುವತಿ ಮತ್ತು ಅವರ ಕುಟುಂಬದವರು ಕಾರಣ ಅಂತಲೂ ಹೇಳಿ ಬಿಟ್ಟಿದ್ದಾನೆ. ಸೊರಬ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

26/06/2022 05:51 pm

Cinque Terre

64.33 K

Cinque Terre

4