ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳ್ಳದಲ್ಲಿ ತೇಲಿಬಂದ 7 ಭ್ರೂಣಗಳು: ಬೆಳಗಾವಿಯ ಮೂಡಲಗಿ ಪಟ್ಟಣದ ಮಧ್ಯದಲ್ಲೇ ಭೀಭತ್ಸ ಘಟನೆ.!

ಬೆಳಗಾವಿ: ಜಿಲ್ಲೆಯ ಮೂಡಲಗಿ ಪಟ್ಟಣದೊಳಗೆ ಹರಿದ ಹಳ್ಳದಲ್ಲಿ ಶುಕ್ರವಾರ ಮಧ್ಯಾಹ್ನ, ಹತ್ಯೆ ಮಾಡಲಾದ ಏಳು ಭ್ರೂಣಗಳು ‍‍ಪತ್ತೆಯಾಗಿವೆ. ಈ ದೃಶ್ಯ ಕಂಡು ಪಟ್ಟಣದ ಜನ ಬೆಚ್ಚಿಬಿದ್ದಾರೆ.

ಒಟ್ಟು ಐದು ಡಬ್ಬಿಗಳಲ್ಲಿ ಏಳು ಭ್ರೂಣಗಳನ್ನು ಹಾಕಿ ಹಳ್ಳಕ್ಕೆ ಎಸೆಯಲಾಗಿದೆ. ಮೂಡಲಗಿ ಬಸ್ ನಿಲ್ದಾಣದ ಬಳಿ ಇರುವ ಹಳ್ಳದಲ್ಲಿ ಭ್ರೂಣಗಳ ಮೃತ ದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಯಾರು ಎಸೆದಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಮೃತದೇಹ ಕಂಡು ಮೂಡಲಗಿ ಜನರು ಹೌಹಾರಿದ್ದಾರೆ.

ಸ್ಥಳಕ್ಕೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಭ್ರೂಣಗಳಿದ್ದ ಡಬ್ಬಗಳನ್ನು ವಶಕ್ಕೆ ಪಡೆದರು. ಭ್ರೂಣಗಳನ್ನು ಸದ್ಯ ಮೂಡಲಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಇಡಲಾಗಿದೆ.

ಭ್ರೂಣಗಳನ್ನು ಈಗಾಗಲೇ ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕೇಸ್ ದಾಖಲಾದ ಬಳಿಕ ಅವುಗಳನ್ನ ಬೆಳಗಾವಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ಮಾಡಲಾಗುವುದು. ಇದನ್ನ ಯಾರು ಮಾಡಿದ್ದಾರೆ, ಎಲ್ಲಿಂದ ಬಂದಿದ್ದು ಎನ್ನುವ ಬಗ್ಗೆ ತನಿಖೆ ಮಾಡಲಾಗುವುದು. ಭ್ರೂಣಗಳ ಹತ್ಯೆ ಕುರಿತು ತನಿಖೆಗೆ ಒಂದು ತಂಡ ಸಹ ರಚನೆ ಮಾಡಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತಂಡ ರಚನೆ ಮಾಡುತ್ತೇವೆ ಎಂದು ಡಿಎಚ್ಒ ಡಾ.ಮಹೇಶ ಕೋಣಿ ತಿಳಿಸಿದ್ದಾರೆ.

Edited By : Vijay Kumar
PublicNext

PublicNext

24/06/2022 05:39 pm

Cinque Terre

128.7 K

Cinque Terre

0