ಬೆಂಗಳೂರು:ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ಎಂಬ ವದಂತಿ ಸುದ್ದಿ ಹರಿದಾಡ್ತಿದೆ. ಈ ಬಗ್ಗೆ ಗುಣರಂಜನ್ ಶೆಟ್ಟಿಕೂಡ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಹಿರಿಯ ಪೊಲೀಸ್ರ ಮಾಹಿತಿ ಪ್ರಕಾರ ಜೈಲಿನಲ್ಲಿ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ತಯಾರಿಗಿರೋ ಬಗ್ಗೆ ಮಾಹಿತಿ ನೀಡಲಾಗಿದೆ.
ಮುತ್ತಪ್ಪ ರೈ ಸಂಬಂಧಿ ಮನ್ಮಿತ್ ರೈ ನಿಂದ ಕೊಲೆಗೆ ಸ್ಕೆಚ್ ಎಂಬ ಸುದ್ದಿ ಹರಿದಾಡ್ತಿದೆ. ಆದರೆ ಮನ್ವಿತ್ ರೈ ವಿದೇಶದಲ್ಲಿರೋ ಬಗ್ಗೆ ಪೊಲೀಸ್ರು ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನೂ ಗುಣರಂಜನ್ ಕೊಲೆಗೆ ಸ್ಕೆಚ್ ಸಂಬಂಧಿಸಿದಂತೆ ಬಂಟ್ವಾಳದ ಮುತ್ತಪ್ಪ ರೈ ಆಪ್ತ ರಾಕೇಶ್ ಮಲ್ಲಿಯನ್ನ ಮಂಗಳೂರು ಪೊಲೀಸ್ರು ಕರೆಸಿ ವಿಚಾರಣೆ ನಡೆಸಿದ್ದಾರೆ. ರಾಕೇಶ್ ಮಲ್ಲಿ ಹಾಗೂ ಮನ್ವಿತ್ ಆಪ್ತರಾಗಿದ್ದು ಇದೇ ವಿಚಾರಕ್ಕೆ ಪೊಲೀಸ್ರು ಕರೆಸಿ ಎನ್ಕ್ವೈರಿ ಮಾಡಿದ್ದಾರೆ. ರೈ ಬದುಕಿದ್ದಾಗ ಒಟ್ಟಿಗೆ ಇದ್ದ ರಾಕೇಶ್ ಮಲ್ಲಿ, ಮನ್ವಿತ್ ಹಾಗೂ ಗುಣರಂಜನ್ ಶೆಟ್ಟಿ ರೈ ಸಾವಿನನಂತರ ದೂರಾಗಿದ್ರು.
ರೈ ಸಾವಿನ ನಂತರ ಡಾನ್ ಪಟ್ಟಕ್ಕೇರಲು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಬೇಕು ಅನ್ನೋನಿಟ್ಟಿನಿಲ್ಲ ದೊಡ್ಡ ತಲೆ ಉರುಳಿಸುವ ಸ್ಕೆಚ್ ಹಾಕಿರೋ ಮಾಹಿತಿ ಪೊಲೀಸ್ರು ಕಲೆ ಹಾಕಿದ್ದಾರೆ. ಗುಣರಂಜನ್ ಶೆಟ್ಟಿ ಜಯಕರ್ನಾಟಕ ಸಂಘಟನೆಯಿಂದ ಹೊರ ಬಂದು ಜಯಕರ್ನಾಟಕ ಜನಪರ ವೇದಿಕೆ ಸ್ಥಾಪಿಸಿದ್ರು.
ಅಷ್ಟೇ ಅಲ್ಲದೇ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರನಾಗಿರುವ ಗುಣರಂಜನ ಶೆಟ್ಟಿ ಮಂಗಳೂರು ಮತ್ತು ಬೆಂಗಳೂರು ಭಾಗದಲ್ಲಿ ಸಾಕೆ ಹೆಸ್ರು ಮಾಡಿದ್ದಾರೆ. ಜೊತೆಗೆ ರೈ ಆಪ್ತವಲಯದಲ್ಲಿ ಗುರುಸಿಕೊಂಡಿದ್ರು ಈ ಕಾರಣಕ್ಕೆ ಗುಣರಂಜನ್ ಶೆಟ್ಟಿ ಕೊಲೆ ಮಾಡಿದ್ರೆ ದೊಡ್ಡ ಮಟ್ಟದ ಹೆಸರು ಮಾಡಬಹುದೆಂದು ಈ ಕೊಲೆಗೆ ಸ್ಕೆಚ್ ಹಾಳಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಗುಣರಂಜನ್ ಶೆಟ್ಟಿ ಕೊಲೆಗೆ ಸಂಚು ವಿಚಾರವಾಗಿ ಇಂದು ಗೃಹಮಂತ್ರಿಗಳಿಗೂ ಸಂಘಟನೆ ವತಿಯಿಂದ ಮನವಿ ಸಲ್ಲಿಸಿದ್ದು ಆರೋಪಿಗಳನ್ನ ಶೀಘ್ರವಾಗಿ ಪತ್ತೆ ಮಾಡಿವಂತೆ ಕೇಳಿಕೊಂಡಿದ್ದಾರೆ.
PublicNext
11/06/2022 09:54 pm