ಹಾವೇರಿ: ದಕ್ಷಿಣ ಭಾರತದ ದೊಡ್ಡ ಸ್ಫಟಿಕ ಲಿಂಗ ಕಳ್ಳತನವಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿಯ ಹಿರೇಮಠದ ಬಾಗಿಲು ಮುರಿದು ಸ್ಫಟಿಕದ ಲಿಂಗವನ್ನು ಕಳ್ಳತನ ಮಾಡಿದ್ದಾರೆ.
ಸ್ಫಟಿಕ ಲಿಂಗವು ಒಟ್ಟು 13 ಇಂಚು ಉದ್ದ ಮತ್ತು 13 ಇಂಚು ಸುತ್ತಳತೆ ಹೊಂದಿದ್ದು, ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಸ್ಫಟಿಕ ಲಿಂಗ ಎಂದು ಹೆಸರುವಾಸಿಯಾಗಿತ್ತು. ಸೋಮವಾರ ರಾತ್ರಿ ಮಠದಲ್ಲಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಇಲ್ಲದ ವೇಳೆ ಲಿಂಗವನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
07/06/2022 02:33 pm