ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೌಟುಂಬಿಕ ಕಲಹ : ವಿಜಯಪುರದಲ್ಲಿ ಅಣ್ಣ-ತಂಗಿಯ ಬರ್ಬರ ಕೊಲೆ

ವಿಜಯಪುರ: ಕಲ್ಲಿನಿಂದ ಜಜ್ಜಿ ಅಣ್ಣ ಹಾಗೂ ತಂಗಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ಅಣ್ಣ ನಾನಾಗೌಡ ಯರಗಲ್ (45) ಹಾಗೂ ತಂಗಿ ರಾಜಶ್ರೀ ಯರಗಲ್ (40) ಕೊಲೆಯಾದ ದುರ್ದೈವಿಗಳು.

ಇನ್ನು ಈ ಕೊಲೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ತಿಳಿದು ಬಂದಿದೆ. ಮೃತ ರಾಜಶ್ರೀ ಗಂಡನೇ ಕೊಲೆ ಮಾಡಿಸಿದ್ದಾನೆ ಎನ್ನಲಾಗಿದೆ. ರಾಜಶ್ರೀ ಗಂಡ ಶಂಕರಲಿಂಗ ಬಿರಾದಾರ, ಹಾಗೂ ಇತರರಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Nirmala Aralikatti
PublicNext

PublicNext

06/06/2022 09:31 pm

Cinque Terre

41.87 K

Cinque Terre

0