ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋಲಾರ್ ಲೈಟ್ ಜಾಗದಲ್ಲಿ ಜಾನುವಾರು ತಲೆಬುರುಡೆ !

ಬೆಳಗಾವಿ: ಗೋಕಾಕ್ ನಗರದ ಫಾಲ್ಸ್ ರಸ್ತೆಯ ಸೋಲಾರ್ ಲೈಟ್ ಕಂಬಕ್ಕೆ ಅದ್ಯಾರೋ ಕಿಡಿಗೇಡಿಗಳು ಜಾನುವಾರದ ತಲೆ ಬುರುಡೆ ಸಿಕ್ಕಿಸಿ ವಿಕೃತಿ ಮೆರೆದಿದ್ದಾರೆ.

ದುರಂತ ಅಂದ್ರೆ ಸೋಲಾರ್ ದೀಪಗಳನ್ನ ಕದ್ದು ಈ ಆ ಜಾಗಕ್ಕೆ ಜಾನುವಾರುಗಳ ತಲೆಬುರುಡೆ ಸಿಕ್ಕಿಸಿ ಹೋಗಿದ್ದಾರೆ. ಕಳೆದ ಎರಡು ದಿನಗಳಿಂದಲೂ ಸೋಲಾರ್ ದೀಪದ ಜಾಗದಲ್ಲಿ ಜಾನುವಾರ ತಲೆಬುರುಡೆ ನೇತಾಡುತ್ತಲೇ ಇದೆ.

ಕಿಡಿಗೇಡಿಗಳ ಈ ಒಂದು ಕೃತ್ಯವನ್ನ ಯಾರು ಮಾಡಿದ್ದಾರೋ ಏನೋ. ಆದರೆ, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಅಂತಲೂ ಪೊಲೀಸರಿಗೆ ಆಗ್ರಹಿಸಿದ್ದಾರೆ.

Edited By :
PublicNext

PublicNext

06/06/2022 02:31 pm

Cinque Terre

72.81 K

Cinque Terre

4