ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳು ನಿಲ್ಲಿಸದ ಕಾರಣಕ್ಕೆ ಮಕ್ಕಳನ್ನೇ ಕೊಂದು ಸುಟ್ಟು ಹಾಕಿದ ತಾಯಿ

ಮುಂಬೈ : ನಿರಂತರವಾಗಿ ಅಳುತ್ತಿದ್ದ ಮಕ್ಕಳನ್ನು ತಾಯಿಯೇ ಕೊಂದು ಸುಟ್ಟು ಹಾಕಿದ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಹೌದು 30 ವರ್ಷದ ಮಹಿಳೆ ತನ್ನ ನಾಲ್ಕು ತಿಂಗಳ ಮಗಳು ಮತ್ತು ಎರಡು ವರ್ಷದ ಮಗ ನಿರಂತರವಾಗಿ ಅಳುತ್ತಿದ್ದಕ್ಕಾಗಿ ಕೊಂದು ನಂತರ ಅವರ ದೇಹವನ್ನು ಸುಟ್ಟು ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮಹಿಳೆ ಧುರ್ಪಾದಾಬಾಯಿ ಗಣಪತ್ ನಿಮಲ್ವಾಡ್ ರನ್ನು ಮತ್ತು ಮಕ್ಕಳ ಶವಗಳನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ ಆಕೆಯ ತಾಯಿ ಮತ್ತು ಸಹೋದರನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಜಿಲ್ಲೆಯ ಭೋಕರ್ ತಾಲೂಕಿನ ಪಾಂಡುರ್ನಾ ಗ್ರಾಮದಲ್ಲಿ ಸತತ ಎರಡು ದಿನ - ಮೇ 31 ಮತ್ತು ಜೂನ್ 1 ರಂದು ಹತ್ಯೆಗಳು ನಡೆದಿವೆ ಎಂದು ಎಂದು ಭೋಕರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

04/06/2022 09:39 am

Cinque Terre

54.55 K

Cinque Terre

6