ಖ್ಯಾತ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನದ, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ನಟನೆಯ ಆರ್‌ಆರ್‌ಆರ್ ಸಿನಿಮಾವು ಭಾರತೀಯ ಚಲನಚಿತ್ರೋದ್ಯಮದಲ್ಲಿ 2022ರ ಅತಿ ಹೆಚ್ಚು ಹಣ ಗಳಿಕೆಯ ಚಲನಚಿತ್ರಗಳಲ್ಲಿ ಒಂದಾಗಿದೆ. ತೆಲುಗು ಭಾಷೆಯ ಆಕ್ಷನ್-ಡ್ರಾಮಾವು ಮಾರ್ಚ್ 2022ರಲ್ಲಿ ಬಿಡುಗಡೆಯಾದಾಗಿನಿಂದ ಹಲವಾರು ಬಾಕ್ಸ್-ಆಫೀಸ್ ದಾಖಲೆಗಳನ್ನು ಮುರಿದಿದೆ.
ಆದಾಗ್ಯೂ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದಾಗಿನಿಂದ ಪ್ರಪಂಚದಾದ್ಯಂತದ ಚಲನಚಿತ್ರ ಪ್ರೇಮಿಗಳು ಚಿತ್ರದಲ್ಲಿ ಸಲಿಂಗಕಾಮಿ ಪ್ರಣಯದ ಥೀಮ್‌ಗಳನ್ನು ಗಮನಿಸುತ್ತಿದ್ದಾರೆ. ಆರ್‌ಆರ್‌ಆರ್ ಯಶಸ್ಸಿನ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ, ಗುರುವಾರ ನೆಟಿಜನ್‌ಗಳು ಆರ್‌ಆರ್‌ಆರ್ ಅನ್ನು 'ಗೇ ಫಿಲ್ಮ್' ಎಂದು ಕರೆಯುವ ವರದಿಗೆ ಪ್ರತಿಕ್ರಿಯಿಸಿದ್ದಾರೆ.
ವರದಿಯನ್ನು ಟ್ವೀಟ್ ಮಾಡಿರುವ ಆರ್‌ಜಿವಿ, 'ನಾನು ಹೇಳಿದ್ದು ಸರಿ'. 'ಅವರು (ನಟರು) ಸಲಿಂಗಕಾಮಿಗಳು' ಎಂದಿರುವ ಪಾಶ್ಚಾತ್ಯ ಪ್ರೇಕ್ಷಕರು 'RRR' ಅನ್ನು ಸಲಿಂಗಕಾಮಿ ಕಥೆ ಎಂದು ಗ್ರಹಿಸುತ್ತಾರೆ' ಎಂದು ಬರೆದುಕೊಂಡಿದ್ದಾರೆ.
PublicNext
02/06/2022 07:00 pm