ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶ್ಮೀರದಲ್ಲಿ ಹಿಂದೂ ಬ್ಯಾಂಕ್ ಮ್ಯಾನೇಜರ್‌ಗೆ ಗುಂಡಿಕ್ಕಿ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಉಗ್ರನೊಬ್ಬ ಗುರುವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಕಣಿವೆಯಲ್ಲಿನ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಹಿಂದೂಗಳನ್ನು ಗುರಿಯನ್ನಾಗಿಸಿ ನಡೆದ ಎರಡನೇ ದಾಳಿ ಇದಾಗಿದೆ.

ದಾಳಿಯಲ್ಲಿ ಕುಲ್ಗಾಮ್ ಜಿಲ್ಲೆಯ ಅರೆಹ್ ಮೋಹನ್‌ಪೋರಾದಲ್ಲಿರುವ ಎಲ್ಲಕಿ ದೇಹತಿ ಬ್ಯಾಂಕ್‌ ಮ್ಯಾನೇಜರ್ ವಿಜಯ್​​ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜಸ್ಥಾನದ ಹನುಮನಗಡ ಜಿಲ್ಲೆಯ ನಿವಾಸಿಯಾಗಿರುವ ವಿಜಯ್ ಕುಮಾರ್ ಅವರು, ಇತ್ತೀಚೆಗಷ್ಟೇ ಕುಲ್ಗಾಂ ಜಿಲ್ಲೆಯಲ್ಲಿನ ಶಾಖೆಯ ಹುದ್ದೆಗೆ ಸೇರಿಕೊಂಡಿದ್ದರು. ಪೊಲೀಸರು ಇಡೀ ಪ್ರದೇಶವನ್ನು ನಿರ್ಬಂಧಿಸಿದ್ದು, ದಾಳಿ ಹಿಂದೆ ಭಾಗಿಯಾಗಿರುವ ಉಗ್ರರನ್ನು ಹೊಡೆದುರುಳಿಸಲು ಪ್ರಯತ್ನ ನಡೆಸಿದ್ದಾರೆ.

Edited By : Vijay Kumar
PublicNext

PublicNext

02/06/2022 04:06 pm

Cinque Terre

215.67 K

Cinque Terre

28

ಸಂಬಂಧಿತ ಸುದ್ದಿ