ನವದೆಹಲಿ: ಖ್ಯಾತ ಗಾಯಕ ಸಿಧು ಮೂಸೆವಾಲಾ ಅವರ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದರಲ್ಲಿ, ಉತ್ತರಾಖಂಡ ಮತ್ತು ಪಂಜಾಬ್ ಪೊಲೀಸರು ಡೆಹ್ರಾಡೂನ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಹೇಳಲಾದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಡೆಹ್ರಾಡೂನ್‌ನಿಂದ ಇಂದು ಬಂಧಿತನಾಗಿರುವ ಶಂಕಿತ ವ್ಯಕ್ತಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನಾಗಿದ್ದು, ಗಾಯಕನ ಹತ್ಯೆಯ ಹೊಣೆಯನ್ನು ಅವನು ಹೊತ್ತುಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಶಂಕಿತ ಆರೋಪಿಯು ಪರ್ವತಗಳಲ್ಲಿ ಹೇಮಕುಂಡ್ ಸಾಹಿಬ್ ಯಾತ್ರೆಯ ಭಾಗವಾಗಿರುವ ಯಾತ್ರಾರ್ಥಿಗಳ ನಡುವೆ ಅಡಗಿಕೊಂಡಿದ್ದ ಎನ್ನಲಾಗಿದೆ. ಉತ್ತರಾಖಂಡದಿಂದ ಇನ್ನೂ ಐವರು ಶಂಕಿತರನ್ನು ಬಂಧಿಸಲಾಗಿದೆ. ಅವರನ್ನೆಲ್ಲ ಪಂಜಾಬ್‌ಗೆ ಕರೆದೊಯ್ಯಲಾಗುತ್ತಿದೆ.
ನಿನ್ನೆ ಪಂಜಾಬ್‌ನ ಮಾನ್ಸಾದಲ್ಲಿ ಸಿಧು ಮೂಸ್ ವಾಲಾ ಅವರು ಎಸ್‌ಯುವಿ ಚಲಾಯಿಸುತ್ತಿದ್ದಾಗ ಗುಂಡು ಹಾರಿಸಿದ್ದರು. ಈ ವರ್ಷದ ಆರಂಭದಲ್ಲಿ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಗಾಯಕ ಸಿಧು ಮೂಸೆ ವಾಲಾರ ಮೇಲೆ, ಸ್ವಯಂಚಾಲಿತ ಆಕ್ರಮಣಕಾರಿ ರೈಫಲ್‌ನಿಂದ 30 ಬಾರಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
30/05/2022 08:50 pm