ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಶ್ರೀನಿವಾಸ ಸಾಗರ ಜಲಾಶಯ ಈಗ ತುಂಬಿದ್ದು, ನೂರಾರು ಜನ ಪ್ರವಾಸಿಗರು ಹಾಗೂ ಯುವಕರು ಇಲ್ಲಿಗೆ ಬರುತ್ತಿದ್ದಾರೆ. ಆದರೆ ನೀರಿನಲ್ಲಿ ಆಟಕ್ಕೆ ಬರುವವರ 'ಹುಚ್ಚಾಟ'ಗಳು ಸಹ ಹೆಚ್ಚಿವೆ. ಶ್ರೀನಿವಾಸ ಸಾಗರದ ಕೋಡಿಯ ತಡೆಗೋಡೆಯ ಮೇಲೆ ಏರಲು ಯುವಕರು ತಾ ಮುಂದು ನಾ ಮುಂದು ಎಂದು ಮುಗಿ ಬೀಳುತ್ತಿದ್ದಾರೆ.
ಭಾನುವಾರ ಹೀಗೆ ತಡೆಗೋಡೆಯ ಮೇಲೆ ಹತ್ತಿದ ಯುವಕನೊಬ್ಬ ಏಕಾಏಕಿ ಬಿದ್ದಿದ್ದಾನೆ. ಆದರೆ ಯಾವುದೇ ಪ್ರಾಣಾಪಾಯ ಆಗಿಲ್ಲ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈತ ಗೌರಿಬಿದನೂರು ತಾಲ್ಲೂಕು ಮೂಲದವನು ಎನ್ನಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
23/05/2022 11:57 am