ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಂಪತಿಯಿಂದ ಮತಾಂತರಕ್ಕೆ ಯತ್ನ ಆರೋಪ: ಪ್ರಕರಣ ದಾಖಲು

ಮಡಿಕೇರಿ: ಒತ್ತಾಯದ ಮತಾಂತರಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಕೊಡಗಿನ ದಂಪತಿ ಮೇಲೆ ಬಂದಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮಂಚಳ್ಳಿ ಗ್ರಾಮಕ್ಕೆ ಕೇರಳದಿಂದ ಬಂದ ದಂಪತಿ ಗ್ರಾಮದಲ್ಲಿರುವ ಬಡ ವರ್ಗದವರನ್ನು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮೂಲಗಳ ಪ್ರಕಾರ KL-12-N2494 ಕಾರಿನಲ್ಲಿ ಕೇರಳದ ಪಡಿಜ್ಞಾತ ಗ್ರಾಮದ ಕುರಿಯಚ್ಚನ್ ಹಾಗೂ ಸೆಲ್ವಿ ಎಂಬ ದಂಪತಿಗಳು ಕೊಡಗಿನ ಮಂಚಳ್ಳಿ ಗ್ರಾಮಕ್ಕೆ ಬಂದಿದ್ದರು.

ಹಿಂದೂಗಳನ್ನು ಮತಾಂತರ ಮಾಡಲು ಕ್ರೈಸ್ತ ದಂಪತಿ ಯತ್ನಿಸುತ್ತಿದ್ದಾರೆ ಎಂದು ಬಜರಂಗದಳ ಕಾರ್ಯಕರ್ತರು ದಂಪತಿಯನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಇಬ್ಬರನ್ನು ಕುಟ್ಟ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಕುಟ್ಟ ಪೊಲೀಸರು ದಂಪತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, 'ಆರೋಪಿಗಳ ವಿರುದ್ಧ ಸೆಕ್ಷನ್ 295ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Edited By : Nagaraj Tulugeri
PublicNext

PublicNext

19/05/2022 11:29 am

Cinque Terre

61.73 K

Cinque Terre

1