ತಾನು ಖರೀದಿ ಮಾಡಲು ಬಂದಿದ್ದೇನೆ ಎಂದು ಫೋಸ್ ಕೊಟ್ಟ ಚಾಲಾಕಿ ಕಳ್ಳನೊಬ್ಬ ಶೋ ರೂಂ ಸಿಬ್ಬಂದಿಗೆ ಮೋಸ ಮಾಡಿ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಹೊಸ ಕಾರನ್ನೇ ಎಗರಿಸಿಕೊಂಡು ಪರಾರಿಯಾಗಿದ್ದಾನೆ.
ಹೌದು ! ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಕಾರ್ ಶೋ ರೂಮ್'ಗೆ ಭೇಟಿ ನೀಡಿದ ವ್ಯಕ್ತಿಯೊಬ್ಬ ಸಿಬ್ಬಂದಿ ಜೊತೆ ಕಾರಿನ ಮಾಹಿತಿ ಪಡೆದು ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಹೊಸ ಟಾಟಾ ಹ್ಯಾರಿಯರ್ ಕಾರು ಪಡೆದು ಎಸ್ಕೇಪ್ ಆಗಿದ್ದಾನೆ.
ಈ ವೇಳೆ 20 ಲಕ್ಷ ರೂಪಾಯಿ ಮೌಲ್ಯದ ಕಾರು ಬೆನ್ನಟ್ಟಿದ್ದ ಶೋ ರೂಂ ಸಿಬ್ಬಂದಿಗಳ ಕೈಗೆ ಸಿಗದಂತೆ ಕಳ್ಳ ಪರಾರಿಯಾಗಿದ್ದು, ಶೋ ರೂಮ್ ಸಿಬ್ಬಂದಿಗಳು ಪೊಲೀಸರ ಮೊರೆ ಹೋಗಿದ್ದಾರೆ.
ಪೊಲೀಸರು ವಾಹನ ಹಾಗೂ ಕಳ್ಳನನ್ನು ಹಿಡಿದು ಕೊಟ್ಟವರಿಗೆ 10,000 ರೂಪಾಯಿ ನಗದು ಹಣ ಬಹುಮಾನ ನೀಡುವುದಾಗಿ ಘೋಷಿಸಿ ಘಟನೆ ನಡೆದ ನಾಲ್ಕು ಗಂಟೆಗಳ ನಂತರ ಖಜೂರಿ ಕೋಥರ್, ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನವನ್ನು ನಿಲ್ಲಿಸಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಕಾರು ಕದ್ದು ಪರಾರಿಯಾದ ಇಬ್ಬರು ಆರೋಪಿಗಳನ್ನೂ ಸಹ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
PublicNext
18/05/2022 02:15 pm