ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಸ್ಥಾನ : ಮದುವೆ ದಿನವೇ ವರ ಪುಲ್ ಟೈಟ್, ಮತ್ತೊಬ್ಬನ ಮದುವೆಯಾದ ವಧು

ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಮದುವೆ ದಿನವೇ ವರನ ಅವತಾರ ನೋಡಿ ವಧು ಆತನನ್ನು ನಿರಾಕರಿಸಿ ಬೇರೊಬ್ಬನನ್ನು ವರಿಸಿದ ಘಟನೆ ರಾಜ್‌ ಗಢ ತಹಸಿಲ್‌'ನ ಚೇಲಾನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮೇ 15 ರಂದು ವರ ಸುನೀಲ್ ಮತ್ತು ಆತನ ಕುಟುಂಬಸ್ಥರು ವಧುವಿನ ಗ್ರಾಮಕ್ಕೆ ಆಗಮಿಸಿದ್ದರು. ರಾತ್ರಿ 9 ಗಂಟೆಗೆ ವಧುವಿನ ಮನೆಗೆ ಬಾರಾತ್ (ಮದುವೆ ಮೆರವಣಿಗೆ) ಹೊರಟಿದೆ.

ಈ ವೇಳೆ ವರ ಮತ್ತು ಅವನ ಸ್ನೇಹಿತರು ಪಾರ್ಟಿ ಮಾಡಿ ಕುಡಿದು ಡಿಜೆ ಹಾಡುಗಳಿಗೆ ಕುಣಿತ ಮುಂದುವರೆಸಿದ್ದಾರೆ. ಇದರಿಂದ ಮದುವೆ ಮೆರವಣಿಗೆ ಹೆಚ್ಚಿನ ಸಮಯ ವಿಳಂಬವಾಗಿದೆ.

ಇದಲ್ಲದೆ ಮರುದಿನ ಬೆಳಿಗ್ಗೆ 1.15 ಕ್ಕೆ ಮದುವೆ ಮುಹೂರ್ತ ನಿಗದಿಯಾಗಿತ್ತು. ಇದಕ್ಕೆ ಪೂರ್ವಭಾಯಾಗಿ ನೆರವೇರಬೇಕಿದ್ದ ಮದುವೆ ಶಾಸ್ತ್ರಗಳು ಸಹ ವಿಳಂಬವಾಗಿದೆ. ಕುಡುಕ ವರನ ಕುಣಿತದಿಂದ ವಧುವಿನ ಕಡೆಯವರು ಸಾಕಾಗಿ ಹೋಗಿದ್ದಾರೆ.

ಇತ್ತ ವರನಿಗಾಗಿ ಕಾದು ನಿರಾಶೆಗೊಂಡ ವಧು ಬಾರಾತ್ (ಮದುವೆ ಮೆರವಣಿಗೆ) ಹಿಂದಿರುಗಿಸಲು ನಿರ್ಧರಿಸಿದ್ದು, ನಂತರ ವಧುವಿನ ಪೋಷಕರು ಆಕೆಯನ್ನು ಬೇರೆ ಯುವಕನೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ದಾರೆ.

ಈ ಘಟನೆಯ ನಡೆದ ಒಂದು ದಿನದ ನಂತರ, ವರನ ಕುಟುಂಬದ ವಿರುದ್ಧ ವಧುವಿನ ಕುಟುಂಬಸ್ಥರು ರಾಜ್‌ ಗಢ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರೊಂದಿಗೆ ಸಮಾಲೋಚನೆ ನಡೆಸಿ ಪರಿಸ್ಥಿತಿ ನಿಭಾಯಿಸಲಾಗಿದೆ.

Edited By : Vijay Kumar
PublicNext

PublicNext

18/05/2022 10:48 am

Cinque Terre

43.73 K

Cinque Terre

1