ನವದೆಹಲಿ: ಸಾವಿರಾರು ಕನಸು ಗಳನ್ನು ಹೊತ್ತ ರೂಪದರ್ಶಿ ಹಾಗೂ ನಟಿ, ಕಾಸರಗೋಡು ಮೂಲದ ಶಹನಾ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ನಿಗೂಢ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕನ್ನಡದ 'ಲಾಕ್ ಡೌನ್' ಸಿನಿಮಾದಲ್ಲಿ ನಟಿಸಿದ್ದ ನಟಿ ಶಹಾನಾಗುರುವಾರ ರಾತ್ರಿ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಕಿರುಕುಳ ಆರೋಪ ಹಿನ್ನೆಲೆ ಆಕೆಯ 31 ವರ್ಷದ ಪತಿಯನ್ನು ವಿಚಾರಣೆಗಾಗಿ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ನಟಿ ಪತಿ ಸಜ್ಜದ್ ವಿರುದ್ಧ ಶಹಾನಾ ಕುಟುಂಬದವರು ಹಲ್ಲೆ, ಕೊಲೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಸಜ್ಜದ್ ತನ್ನ ಮಗಳಿಗೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ಶಹಾನಾ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.'ಮಾಡೆಲಿಂಗ್ ಗಾಗಿ ಪಡೆದ ಕೆಲವು ಚೆಕ್ ಗೆ ಸಂಬಂಧಿಸಿದಂತೆ ಗಂಡ-ಹೆಂಡತಿ ಜಗಳವಾಡಿದ್ದಾರೆ ಎಂಬ ಮಾಹಿತಿ ಇದೆ.
ಸದ್ಯ ಕೇವಲ 20 ವರ್ಷದ ನಟಿ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
PublicNext
14/05/2022 07:50 am