ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗಳಿಗೆ ಕಿರುಕುಳ ಕೊಟ್ಟ ಅಳಿಯನನ್ನು ಕಲ್ಲಿನಿಂದ ಜಜ್ಜಿ ಕೊಂದ ಮಾವ.!

ಚಾಮರಾಜನಗರ: ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿದ್ದರಿಂದ ಮಾವನೋರ್ವ ತನ್ನ ಅಳಿಯನನ್ನೇ ಕೊಂದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಜಾಗೇರಿ ಗ್ರಾಮದಲ್ಲಿ ನಡೆದಿದೆ.

ಜಾಗೇರಿಯ ಸಿ.ಆರ್.ನಗರದ ನಿವಾಸಿ ಅಂತೋಣಿಸ್ವಾಮಿ (23) ಕೊಲೆಯಾದ ವ್ಯಕ್ತಿ. ಮಾವ ರಾಜು (42) ಕಲ್ಲಿನಿಂದ ತಲೆಗೆ ಹೊಡೆದು ಸಾಯಿಸಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ. ರಾಜು ಎಂಬುವರ ಮಗಳು ಜಾನ್ಸಿಯನ್ನು ಅಂತೋಣಿಸ್ವಾಮಿ ಪ್ರೀತಿಸಿ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ. ಆದರೆ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ ಇಬ್ಬರು ಜಗಳವಾಡುತ್ತಿದ್ದರು.

ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದರಿಂದ ಮಗಳು ಜಾನ್ಸಿಯನ್ನು ಅಯ್ಯಾವೋ ತನ್ನ ಮನೆಗೆ ಕರೆತಂದು ಇಟ್ಟುಕೊಟ್ಟಿದ್ದನಂತೆ. ಮಂಗಳವಾರ ರಾತ್ರಿ ಆಂತೋಣಿ ತನ್ನ ಹೆಂಡತಿಯನ್ನು ಮನೆಗೆ ಕಳುಹಿಸುವಂತೆ ಕೇಳಿದ್ದನಂತೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಸಿಟ್ಟಿನ ಭರದಲ್ಲಿ ಕಲ್ಲಿನಿಂದ ಆಂಥೋನಿಗೆ ಹೊಡೆದು ಕೊಂದಿದ್ದಾನೆ ಎನ್ನಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

11/05/2022 08:32 pm

Cinque Terre

37.75 K

Cinque Terre

0