ಬೆಂಗಳೂರು ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಪೆಟ್ರೋಲ್ ಬಾಂಬ್ ತಯಾರಿ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಜೈಲಿನಲ್ಲಿನಯೇ ಇರುವ ಕಿರಾತಕನೊಬ್ಬ ಈ ಸ್ಕೆಚ್ ರೆಡಿ ಮಾಡಿದ್ದಾನೆ. ಆದರೆ ಸಂಚುಕೋರರ ಯೋಜನೆ ಕಾರ್ಯಗತ ಆಗುವ ಮೊದಲೇ ಪೂರ್ವ ವಿಭಾಗದ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಆಗಬಹುದಾದ ದೊಡ್ಡ ಅನಾಹುತವನ್ನು ಪೊಲೀಸರು ತಪ್ಪಿಸಿದ್ದಾರೆ.
ಸಾರಾಯಿ ಪಾಳ್ಯದ ನಿವಾಸಿ, ರೌಡಿ ಶೀಟರ್ ಮಹಮದ್ ಅಜೀಮುದ್ದೀನ್ ಮತ್ತು ಹೆಗ್ಗಡೆ ನಗರದ ನಿವಾಸಿ ಮುನಾವರ್ ಪಾಷ, ಸಾಧಿಕ್ ಪಾಷಾ, ಅಸ್ಲಂ ಪಾಷಾ, ಕೈಪ್ ಖಾನ್ ಸಿದ್ಧಕಿ ಹುಸೇನ್, ಸಿಕ್ಕು, ಸಯ್ಯದ್ ಆಸ್ಕರ್ ಇತರರು ಸೇರಿಕೊಂಡು ದೊಡ್ಡ ಗಲಭೆ ಉಂಟು ಮಾಡಲು ಪ್ಲಾನ್ ರೂಪಿಸಿದ್ದಾರೆ.
ಎದುರಾಳಿ ಗುಂಪಿನ ಮೇಲೆ ಮಾರಣಾಂತಿಕ ದಾಳಿ ಮಾಡಲು ಪ್ಲಾನ್ ರೂಪಿಸಿರುವ ಈ ಗ್ಯಾಂಗ್, ಈ ಮೂಲಕ ಅಶಾಂತಿ ಸೃಷ್ಟಿಸಲು ಸಂಚು ರೂಪಿಸಿದೆ. ಇದಕ್ಕಾಗಿ ಪೆಟ್ರೋಲ್ ಬಾಂಬ್, ಮಚ್ಚು ಲಾಂಗು ಹಾಗೂ ಪಿಸ್ತುಲ್ಗಳನ್ನು ಸಂಗ್ರಹಿಸಿತ್ತು.ಬಂಧಿತ ಆರೋಪಿಗಳಿಂದ 1 ನಾಡಾ ಪಿಸ್ತೂಲ್, 1 ಜೀವಂತ ಗುಂಡು, 10 ಬಿಯರ್ ಬಾಟಲ್, ಲಾಂಗ್ ಮತ್ತು ಮಚ್ಚುಗಳನ್ನು ವಶಕ್ಕೆ ಪಡೆದಿದ್ದಾರೆ.
PublicNext
09/05/2022 10:49 pm