ಹೈದರಾಬಾದ್: ದಲಿತ ಯುವಕನೊಬ್ಬ ಮುಸ್ಲಿಂ ಸಮುದಾಯದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಿತಗೊಂಡ ಯುವತಿ ಸಹೋದರರು 25 ವರ್ಷದ ದಲಿತ ಯುವಕ ನಾಗರಾಜು ಎಂಬುವವರನ್ನು ನಡು ಬೀದಿಯಲ್ಲಿಯೇ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್ ನ ಸರೂರ್ ನಗರದಲ್ಲಿ ನಡೆದಿದೆ.
ಯುವಕ ಕೊಲೆಯಾದ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿ ಬರ್ಬರವಾಗಿ ಇರಿದು ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಸ್ಥಳೀಯ ಮಾಧ್ಯಮಗಳ ವರದಿಯ ಅನ್ವಯ, ಮೃತ ನಾಗರಾಜು ಸೈಯದ್ ಅಶೀರಾ ಸುಲ್ತಾನಾ ಎಂಬ ಯುವತಿಯನ್ನು ಕಾಲೇಜು ದಿನಗಳಿಂದ ಪ್ರೀತಿ ಮಾಡುತ್ತಿದ್ದ. 2022ರ ಜನವರಿಯಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಮದುವೆಯ ಬಳಿಕ ಯುವತಿ ಹಿಂದೂ ಧರ್ಮಕ್ಕೆ ಮತಾಂತ ಆಗಿ ತನ್ನ ಹೆಸರನ್ನು ಪಲ್ಲವಿ ಎಂದು ಬದಲಾಯಿಸಿಕೊಂಡಿದ್ದಳು. ಈ ನಡುವೆ ಇಬ್ಬರು ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಯುವತಿಯ ಕುಟುಂಬಸ್ಥರು ದಾಳಿ ಮಾಡಿ ನಾಗರಾಜುನನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಸದ್ಯ ಕೊಲೆಗೆ ಸಂಬಂಧಿಸಿದಂತೆ ಮಹಿಳೆಯ ಸಹೋದರ ಮತ್ತು ಆತನ ಸಂಬಂಧಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಎಲ್ ಬಿ ನಗರ ವಿಭಾಗ) ಪಿ ಶ್ರೀಧರ್ ರೆಡ್ಡಿ ತಿಳಿಸಿದ್ದಾರೆ.
PublicNext
05/05/2022 05:39 pm