ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಮರಳು ದಂಧೆಕೋರರು, ಹಫ್ತಾ, ತಿಂಗಳು ಮಾಮೂಲು ವಸೂಲಿಗಾರರಿಗೆ ಎಸ್‌ಪಿ ವಾರ್ನಿಂಗ್

ದಾವಣಗೆರೆ: ಅಕ್ರಮ ಮರಳು ದಂಧೆಕೋರರು, ಹಫ್ತಾ ವಸೂಲಿ ಮಾಡುವವರು, ತಿಂಗಳು ಮಾಮೂಲು ಪಡೆಯುವವರು ಹಾಗೂ ರೌಡಿಸಂ ಮಾಡುವವರಿಗೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಳುಗಾರಿಕೆ ನಡೆಸುವವರಿಗೆ ಬೆದರಿಕೆ ಹಾಕುವುದು ಹಾಗೂ ತಿಂಗಳು ಮಾಮೂಲಿ ವಸೂಲಿ ಮಾಡುತ್ತಿರುವುದು ಗೊತ್ತಾಗಿದೆ. ಈಗಾಗಲೇ ಒಂದು ಕೋಟಿ 25 ಲಕ್ಷ ರೂಪಾಯಿ ಈ ರೀತಿಯ ಕೃತ್ಯ ಮಾಡಿದವರಿಂದ ವಶಕ್ಕೆ ಪಡೆಯಲಾಗಿದೆ. ದೂರು ಕೊಟ್ಟರೆ ಎಷ್ಟೇ ದೊಡ್ಡವರಾದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ. ಜನರು ಸಹ ಯಾವುದೇ ರೀತಿಯ ಭಯಪಡದೇ ದೂರು‌ ಕೊಡಿ. ಉಳಿದಿದ್ದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆಯೂ ದೂರು‌ ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇವೆ. ಮೈಸೂರು ಇಮ್ರಾನ್ ಸಿದ್ದಿಕಿ ಬಳಿ ಸುಮಾರು 75 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದೇವೆ. ಆತನ ಬಳಿ ಎರಡು ಬೆಂಜ್ ಕಾರುಗಳಿವೆ. ಆದ್ರೆ ಕೃತ್ಯಕ್ಕೆ ಬಳಸಿಲ್ಲ. ಐಷಾರಾಮಿ ಜೀವನ ನಡೆಸುತ್ತಿದ್ದ. ಯಾರೇ ಆದರೂ ಕಾನೂನು ವಿರೋಧಿ ಕೃತ್ಯ ಎಸಗಿದರೆ ಕಠಿಣ ಕ್ರಮ ಖಚಿತ ಎಂದು ತಿಳಿಸಿದರು.

ಈಗಾಗಲೇ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ ಮೂವರನ್ನು ಬಂಧಿಸಿದ್ದೇವೆ. ಇನ್ನು ಹಲವರು ಈ ಪ್ರಕರಣದಲ್ಲಿದ್ದಾರೆ. ತನಿಖೆ ಮುಂದುವರಿದಿದೆ. ಈಗ ಸಿಕ್ಕಿ ಬಿದ್ದಿರುವ ಸಿದ್ಧಿಕಿ ಮಾಮೂಲು ಹಣ ವಸೂಲು ಮಾಡಲು ಜನರನ್ನು ಇಟ್ಟುಕೊಂಡಿದ್ದ‌.‌ ಆಗಾಗ್ಗೆ ಬದಲಾವಣೆ ಆಗುತ್ತಲೇ ಇರುತ್ತಾರೆ. ಒಟ್ಟಾರೆ ಜನರು ಮುಂದೆ ಬಂದು ದೂರು ಕೊಟ್ಟರೆ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ ಎಂದು ಹೇಳಿದರು.

Edited By : Shivu K
PublicNext

PublicNext

05/05/2022 11:16 am

Cinque Terre

85.96 K

Cinque Terre

3