ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ಆ್ಯಸಿಡ್ ದಾಳಿ ಪ್ರಕರಣ: ಯುವತಿಗೆ ಪ್ಲಾಸ್ಟಿಕ್ ಸರ್ಜರಿ

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಯುವತಿಯ ಮೇಲೆ ಆಸಿಡ್ ದಾಳಿ ಪ್ರಕರಣ ಸಂಬಂಧ, ಕಳೆದ ಆರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಯುವತಿಗೆ ವೈದ್ಯರು ಪ್ಲಾಸ್ಟಿಕ್ ಸರ್ಜರಿ ನಡೆಸಿದ್ದಾರೆ. ಯುವತಿಯ ಎರಡು ತೊಡೆ ಭಾಗ ಸ್ಕಿನ್ ತೆಗೆದು ಸುಟ್ಟ ಭಾಗಕ್ಕೆ ಕಸಿ‌ಮಾಡಿದ್ದಾರೆ. ಯುವತಿಯ ಆರೋಗ್ಯದಲ್ಲಿ ಅಲ್ಪ ಚೇತರಿಕೆ‌ ಕಂಡು ಬಂದಿದ್ದು, ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ.

ಇನ್ನೂ ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಪೋಷಕರಲ್ಲೂ ಕೊಂಚ ಸಮಾಧಾನ ಮೂಡಿದೆ. ಯುವತಿಗೆ ನಿನ್ನೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಇನ್ಸ್ಪೆಕ್ಷನ್ ಆಗದ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಪ್ರಜ್ಞಾಹೀನಳಾಗಿದ್ದ ಯುವತಿ ಮಧ್ಯರಾತ್ರಿ ವೇಳೆಗೆ ಪ್ರಜ್ಞೆ ಬಂದಿದ್ದು, ಪೋಷಕರ ಜೊತೆ ಮಾತನಾಡುತ್ತಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯ ಸೇಂಟ್ ಜಾನ್ಸ್ ಅಸ್ಪತ್ರೆ ಐಸಿಯುನಲ್ಲಿ ಯುವತಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

Edited By :
PublicNext

PublicNext

03/05/2022 03:11 pm

Cinque Terre

47.03 K

Cinque Terre

1