ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಎಸ್‌ಐ ಪರೀಕ್ಷಾ ಅಕ್ರಮ: ದಿವ್ಯಾ ಹಾಗರಗಿಗೆ ಆಶ್ರಯ ನೀಡಿದ್ದರಾ ಮರಳು ವ್ಯಾಪಾರಿಗಳು?

ಕಲಬುರಗಿ: ಪಿಎಸ್‌ಐ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಹಾಗೂ ಆಕೆಗೆ ಆಶ್ರಯ ನೀಡಿದ್ದ ಆರೋಪಿಗಳಾದ ಸುರೇಶ್ ಕಾಟೇಗಾಂವ ಹಾಗೂ ಕಾಳಿದಾಸ ಸೇರಿ ಒಟ್ಟು ಆರು ಜನ ಆರೋಪಿಗಳನ್ನು ಪೊಲೀಸರು ಕಲಬುರಗಿ ಸಿಐಡಿ ಕಚೇರಿಗೆ ಕರೆ ತಂದಿದ್ದಾರೆ.

ಇವರೊಂದಿಗೆ ದಿವ್ಯಾ ಹಾಗರಗಿ ಅವರಿಗೆ ಸೇರಿದ್ದು ಎನ್ನಲಾದ ಜ್ಞಾನಜ್ಯೋತಿ ಶಾಲೆಯ ಶಿಕ್ಷಕಿಯರಾದ ಅರ್ಚನಾ, ಸುನೀತಾ ಎಂಬುವರನ್ನೂ ಬಂಧಿಸಿ ಕರೆತರಲಾಗಿದೆ. ಗುರುವಾರ ಮಧ್ಯರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಇವರನ್ನೆಲ್ಲ ಬಂಧಿಸಲಾಗಿದೆ.

ದಿವ್ಯಾ ಹಾಗರಗಿ ಮೇಲೆ ಪಿಎಸ್‌ಐ ಪರೀಕ್ಷಾ ಅಕ್ರ‌ಮದ ಆರೋಪ ಕೇಳಿ ಬಂದ ಮೇಲೆ ಆಕೆಗೆ ಭೀಮಾ ತೀರದ ಮರಳು‌ ವ್ಯಾಪಾರಿ ಸುರೇಶ್ ಕಾಟೇಗಾಂವ್ ಆಶ್ರಯ ನೀಡಿದ್ದ ಎನ್ನಲಾಗಿದೆ. ಬಂಧಿತ ದಿವ್ಯಾ ಹಾಗರಗಿ ಮತ್ತು ಸುರೇಶ್ ಕಾಟೇಗಾಂವ್ ನಡುವೆ ಈ ಮೊದಲಿನಿಂದಲೂ ಸಂಪರ್ಕ ಇತ್ತಾ? ಮತ್ತು ಇವರ ನಡುವೆ ಹೇಗೆ?, ಯಾವ ಉದ್ದೇಶಕ್ಕೆ ಸಂಪರ್ಕ ಬೆಳೆಯಿತು ಎಂಬ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.‌

ಇಂದು ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ಅಕ್ರಮದಲ್ಲಿ ಭಾಗಿ ಆಗಿದ್ದಾರೆನ್ನಲಾದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್, ಪರೀಕ್ಷಾ ಮೇಲ್ವಿಚಾರಕಿಯಾಗಿದ್ದ ಸುನಂದಾ ಹಾಗೂ ಅಕ್ರಮ ಎಸಗಿದ ಆರೋಪ ಇರುವ ಶಾಂತಾಬಾಯಿ ಪತ್ತೆಗಾಗಿ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

29/04/2022 06:29 pm

Cinque Terre

56.03 K

Cinque Terre

5

ಸಂಬಂಧಿತ ಸುದ್ದಿ