ಹಾವೇರಿ : ಪಿ.ಎಸ್ ಐ ನೇಮಕಾತಿ ಅಕ್ರಮ ವಿಚಾರ ಬಗೆದಷ್ಟು ಬಯಲಾಗುತ್ತಿದೆ ಇದರ ಮಧ್ಯೆ ಇಲ್ಲೊಬ್ಬ ಅಭ್ಯರ್ಥಿ ನೇಮಕಾತಿ ಆದೇಶ ಕೈ ಸೇರುವ ಮೊದಲೇ ಪಿ.ಎಸ್.ಐ ಆಗಿ ಪೋಸ್ ಕೊಟ್ಟಿರುವ ಅನುಮಾನ ವ್ಯಕ್ತವಾಗುತ್ತಿದೆ.
ಹೌದು ಹಾವೇರಿ ತಾಲೂಕು ಗುಡಸಲಕೊಪ್ಪ ಗ್ರಾಮದ ಪೊಲೀಸ್ ಕಾನ್ಸಟೇಬಲ್ ಬಸನಗೌಡ ತಿ ಕರೇಗೌಡ್ರ ಬೆಂಗಳೂರಿನ ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಆಗಿದ್ದ. ಇದೇ ವೇಳೆ
545 ಪಿ.ಎಸ್.ಐ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿತ್ತು. 3/10/2021 ರಂದು ಪಿ.ಎಸ್ ಐ ಲಿಖಿತ ಪರೀಕ್ಷೆ ಬರೆದಿದ್ದ ಬಸನಗೌಡ 19/1/22 ರಂದು ಪೊಲೀಸ್ ಇಲಾಖೆಯಿಂದ ಪಿ.ಎಸ್ ಐ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಆಗಿದೆ.
ಪಿ.ಎಸ್ ಐ ಲಿಸ್ಟ್ ನಲ್ಲಿ ರ‍್ಯಾಂಕ್ ನಂಬರ್ 27 ಪಡೆದಿದ್ದ ಬಸನಗೌಡ ಕರೇಗೌಡ್ರ ಪಿ.ಎಸ್ ಐ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆಯಾದ ನಾಲ್ಕೈದು ದಿನಕ್ಕೆ ಗ್ರಾಮದಲ್ಲಿ ಫುಲ್ ಸೆಲೆಬ್ರೇಷನ್ ಮಾಡಿದ್ದಾನೆ.
ಅಧೀಕೃತ ನೇಮಕಾತಿ ಆದೇಶ ಕೈ ಸೇರುವ ಮೊದಲೇ ಪಿ.ಎಸ್ ಐ ಯುನಿಫಾರ್ಮ್ ಹಾಕಿಕೊಂಡು ಸೆಲೆಬ್ರೇಷನ್ ? ಮಾಡಿದ್ದಾನೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸನಗೌಡ ಅವರಿಗೆ ಅಭಿನಂದನೆ ಕೂಡಾ ಸಲ್ಲಿಸಿದ್ದಾರೆ.
ಅಡ್ವಾನ್ಸ್ ಆಗಿಯೇ ಯುನಿಫಾರಂ ರೆಡಿ ಮಾಡಿಸಿ ಹಾಕಿಕೊಂಡು ಸೆಲೆಬ್ರೇಷನ್ ಮಾಡಿದ್ದ ಈ ವಿಚಾರವನ್ನು ಗಮನಿಸಿದರೆ ಇವರಿಗೆ ಮೊದಲೇ ಪಿ.ಎಸ್.ಐ ಹುದ್ದೆಗೆ ಸೆಲೆಕ್ಟ್ ಆಗ್ತೀನಿ ಅಂತ ಗೊತ್ತಾಗಿತ್ತಾ ಎನ್ನುವ ಅನುಮಾನ ಶುರುವಾಗಿದೆ.
ಅಷ್ಟಕ್ಕೂ ಬಸನಗೌಡ ಇಷ್ಟು ಕಾನ್ಪಿಡೆನ್ಸ್ ಆಗಿ ಪಿ.ಎಸ್.ಐ ಯುನಿಫಾರಂ ಧರಿಸಿ ಓಡಾಡಿದ್ಹೇಗೆ ಮುಂಚಿತವಾಗೇ ಪಿ.ಎಸ್.ಐ ಪೋಸ್ಟ್ ಅಡ್ವಾನ್ಸ್ ಬುಕ್ ಆಗಿತ್ತಾ? ಹೀಗೆ ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ ಬಸನಗೌಡ ನಡೆ
ಸದ್ಯ ಈತನಿಗೆ ಸಿ.ಐ.ಡಿ ಸಹಾಯಕ ತನಿಖಾಧಿಕಾರಿಗಳ ಮುಂದೆ ನಾಳೆ ಬೆಳಿಗ್ಗೆ 10 ಗಂಟೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿದೆ
ಪರೀಕ್ಷೆ ಹಾಲ್ ಟಿಕೇಟ್ ಹಾಗೂ ಓ.ಎಂ.ಆರ್ ಕಾರ್ಬನ್ ಪ್ರತಿಯೊಂದಿಗೆ ತನಿಖೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಬಸನಗೌಡ ಸೇರಿದಂತೆ ಇನ್ನು 50 ಜನರಿಗೆ ನೋಟೀಸ್ ನೀಡಿರುವ ಸಿ.ಐ.ಡಿ ತನಿಖೆಯನ್ನು ಚುರುಕುಗೊಳಿಸಿದೆ.
PublicNext
23/04/2022 01:42 pm