ಎನ್‌ಟಿಆರ್: ಆಂಧ್ರ ಪ್ರದೇಶದ ಎನ್‌ಟಿಆರ್ ಜಿಲ್ಲೆಯ ವಿಜಯವಾಡ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಅತ್ಯಂತ ಹೇಯ ಕೃತ್ಯ ನಡೆದಿದೆ. 23 ವರ್ಷದ ಬುದ್ಧಿಮಾಂದ್ಯ ಯುವತಿ ಮೇಲೆ ಮೂವರು ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು ಸುಮಾರು 30 ಗಂಟೆಗಳ ಕಾಲ ಆಕೆ ಜೊತೆ ಅತ್ಯಂತ ಕ್ರೂರವಾಗಿ ನಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಆಕೆಯ ತಂದೆ ಎದುರೇ ಅತ್ಯಾಚಾರ ನಡೆದಿದೆ ಎನ್ನಲಾಗಿದೆ.
ಎನ್‌ಟಿಆರ್ ಜಿಲ್ಲೆಯ ಕಾಲೋನಿವೊಂದರಲ್ಲಿ 23 ವರ್ಷದ ಯುವತಿ ಬುದ್ಧಿಮಾಂದ್ಯದಿಂದ ಬಳಲುತ್ತಿದ್ದಾರೆ. ಈ ತಿಂಗಳ 19ರಂದು ಮನೆಯಲ್ಲಿ ಒಬ್ಬಳೇ ಇದ್ದಾಗ ಅದೇ ಪ್ರದೇಶದ 26 ವರ್ಷದ ದಾರಾ ಶ್ರೀಕಾಂತ್ ಎಂಬಾತ ಆಕೆಯನ್ನು ಮದುವೆಯಾಗುವುದಾಗಿ ಮತ್ತು ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ.
ಸರ್ಕಾರಿ ಆಸ್ಪತ್ರೆಯ ಕೀಟ ನಿಯಂತ್ರಣ ವಿಭಾಗದಲ್ಲಿ ಗುತ್ತಿಗೆ ನೌಕರನಾಗಿ ಶ್ರೀಕಾಂತ್ ಕೆಲಸ ಮಾಡುತ್ತಿದ್ದಾನೆ. ಕರ್ತವ್ಯದ ವೇಳೆ ಯುವತಿಯನ್ನು ತನ್ನೊಂದಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಪೆಸ್ಟ್ ಕಂಟ್ರೋಲ್ ಯೂನಿಟ್ಗೆ ನಿಯೋಜಿಸಲಾಗಿದ್ದ ಕೊಠಡಿಯಲ್ಲಿ ರಾತ್ರಿಯಿಡೀ ಆಕೆಯನ್ನು ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾನೆ.ಆಸ್ಪತ್ರೆ ಆವರಣದಲ್ಲಿ ಅಲೆದಾಟ : ತನ್ನ ಕೆಲಸದ ಬಳಿಕ ಮರುದಿನ ಅಂದ್ರೆ ಏಪ್ರಿಲ್ 20ರಂದು ಬೆಳಗ್ಗೆ ಆಕೆಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಮನೆಗೆ ತೆರಳಿದ್ದಾನೆ. ಪಾಪ ಆ ಯುವತಿ ತನ್ನ ಮನೆ ವಿಳಾಸ ಗೊತ್ತಾಗದೇ ಮತ್ತು ಯಾರನ್ನ ಸಂಪರ್ಕಿಸಬೇಕೆಂದು ತಿಳಿಯದೆ ಆಸ್ಪತ್ರೆ ಆವರಣದಲ್ಲಿ ಅಲೆದಾಡುತ್ತಿದ್ದಳು.
ಆಕೆಯ ಮೇಲೆ ಮತ್ತಿಬ್ಬರ ಕಣ್ಣು: ಆಸ್ಪತ್ರೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿದ್ದ 23 ವರ್ಷ ವಯಸ್ಸಿನ ಚೆನ್ನ ಬಾಬುರಾವ್ ಮತ್ತು ಅವನ ಸ್ನೇಹಿತ 23 ವರ್ಷ ವಯಸ್ಸಿನ ಜೋರಂಗುಲ ಪವನ್ ಕಲ್ಯಾಣ್ ಆಸ್ಪತ್ರೆ ಆವರಣದಲ್ಲಿ ಯುವತಿ ಒಂಟಿಯಾಗಿ ಅಲೆದಾಡುತ್ತಿರುವುದನ್ನು ಗುರುತಿಸಿದ್ದಾರೆ. ಬಳಿಕ ಇಬ್ಬರು ಸೇರಿ ಆಕೆಯನ್ನು ಮತ್ತೊಂದು ಕೋಣೆಯಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾರೆ.
PublicNext
22/04/2022 06:19 pm