ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಲಿಸುತ್ತಿರುವ ಬೈಕ್ ಮೇಲೆ ಬಿಂದಾಸ್ ರೋಮ್ಯಾನ್ಸ್: ಎಲ್ಲರೆದುರು ಲಿಪ್ ಕಿಸ್

ಚಾಮರಾಜನಗರ: ಲವ್ ಮಾಡಿ ಬೇಡ ಅನ್ನಲ್ಲ. ಆದ್ರೆ ಅದರ ಹೆಸರಲ್ಲಿ ಬೀದಿಯಲ್ಲಿ ಮಾಡಬಾರದ್ದನ್ನು ಮಾಡುತ್ತ ಮೈಮರೆತರೆ ಒಂದು ಹೋಗಿ ಹನ್ನೊಂದಾಗುತ್ತೆ.

ಇದಕ್ಕೆ ಬೆಸ್ಟ್ ಉದಾಹರಣೆ ಇಲ್ಲಿದೆ. ಚಲಿಸುತ್ತಿರುವ ಬೈಕ್ ಮೇಲೆ ಈ ಪಾಗಲ್ ಪ್ರೇಮಿಗಳು ಮೈಚಳಿ ಬಿಟ್ಟು ರೋಮ್ಯಾನ್ಸ್ ಮಾಡಿದ್ದಾರೆ‌. ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯಲ್ಲಿ ಪ್ರೇಮಿಗಳು ತಮ್ಮ ಪ್ರೇಮವನ್ನು ಈ ರೀತಿ ದಾರಿಹೋಕರಿಗೆಲ್ಲ ಪ್ರದರ್ಶಿಸಿದ್ದಾರೆ. ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿ ಪ್ರಿಯಕರನನ್ನು ಬಿಗಿದಪ್ಪಿ ಅದರ ಚುಂಬನದ ಭಾವಭಂಗಿಯಲ್ಲಿ ಮುಳುಗಿಬಿಟ್ಟಿದ್ದಾಳೆ. ಇನ್ನು ಪ್ರಿಯತಮ ಅದನ್ನೆಲ್ಲ ಆಸ್ವಾದಿಸುತ್ತ ಅತ್ತಿಂದಿತ್ತ ಬೈಕ್ ಚಲಾಯಿಸಿದ್ದಾನೆ. ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಇತರರು ಇವರ ಲವಿಡವಿ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಅದರ ದೃಶ್ಯಗಳು ವೈರಲ್ ಆಗುತ್ತಿದ್ದು ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

Edited By : Shivu K
PublicNext

PublicNext

22/04/2022 05:35 pm

Cinque Terre

100.62 K

Cinque Terre

21