ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್: ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ- ವಿದ್ಯುತ್‌ ತಗುಲಿ ಕೂಲಿ ಕಾರ್ಮಿಕರಿಗೆ ಗಂಭೀರ ಗಾಯ

ಬೀದರ್: ಮನೆಗೆ ಬಣ್ಣ ಹಚ್ಚುತ್ತಿದ್ದ ಇಬ್ಬರು ಪೇಂಟರ್‌ಗಳಿಗೆ ವಿದ್ಯುತ್‌ ತಗುಲಿ ಗಂಭೀರವಾಗಿ ಗಾಯಗೊಂಡ ಘಟನೆ ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಬರುವ ಹೊನ್ನಡ್ಡಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್‌ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಿವರಾಜ್ ಶೇಕಾಪೂರ (38) ಹಾಗೂ ಮೈನುದ್ದಿನ್ ಶೇಕಾಪೂರ (35) ವಿದ್ಯುತ್ ಶಾಕ್‌ನಿಂದ ಗಾಯಗೊಂಡವರು. ಇಬ್ಬರೂ ಕೂಡ ಸತೀಶ್ ಧೂಳಪ್ಪ ಅವರ ಮನೆಗೆ ಪೇಂಟ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ 11,000 ವ್ಯಾಟ್ ವಿದ್ಯುತ್ ತಂತಿ ತಗುಲಿ ಒಬ್ಬರ ಕಾಲಿನ ಬೆರಳುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಇನ್ನೊಬ್ಬರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೀದರ್ ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಿಸಲಾಗುತ್ತಿದೆ.

ಜೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ:

ಹೊನ್ನಡ್ಡಿ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಹಾಗೂ ವೈರ್‌ಗಳು ಸುಮಾರು 50 ವರ್ಷ ಹಳೆಯದ್ದಾಗಿವೆ. ಅವುಗಳನ್ನು ದುರಸ್ತಿ ಮಾಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅವರ ಈ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂದು ಹೊನ್ನಡ್ಡಿಯ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಮರ್ ತರನಳ್ಳಿ ದೂರಿದ್ದಾರೆ.

Edited By : Shivu K
PublicNext

PublicNext

20/04/2022 08:49 am

Cinque Terre

167.48 K

Cinque Terre

1

ಸಂಬಂಧಿತ ಸುದ್ದಿ