ಧುಳೆ: ಉಡದ ಮೇಲೆ ಅತ್ಯಾಚಾರ ಎಸಗಿದ ನಾಲ್ವರು ವಿಕೃತ ಕಾಮುಕರನ್ನು ಮಹಾರಾಷ್ಟ್ರದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಧುಳೆ ಜಿಲ್ಲೆಯ ಗೋಠಾಣೆ ಸಮೀಪದ ಗಭಾ ಪ್ರದೇಶದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಈ ವಿಕೃತರು ನಾಲ್ಕೂವರೆ ಅಡಿ ಉದ್ದದ ಉಡದ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು ಬೇಟೆಯಾಡಲು ಕಾಡಿಗೆ ಬಂದಿದ್ದು ಅದರ ದೃಶ್ಯಾವಳಿಗಳು ಅರಣ್ಯ ಇಲಾಖೆಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮೊದಲು ಓರ್ವ ಶಂಕಿತನನ್ನು ಬಂಧಿಸಿದ ಅರಣ್ಯಾಧಿಕಾರಿಗಳು ಆತನಿಂದ ಬಾಯ್ಬಿಡಿಸಿ ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಯ ಮೊಬೈಲ್‌ನಲ್ಲಿ ಉಡದ ಮೇಲೆ ಅತ್ಯಾಚಾರ ಎಸಗಿದ ವಿಡಿಯೋ ನೋಡಿದ ಅರಣ್ಯಾಧಿಕಾರಿಗಳು ದಂಗಾಗಿದ್ದಾರೆ. ಸದ್ಯ ನಾಲ್ವರು ಆರೋಪಿಗಳಿಂದ ಬೇಟೆ ಸಾಮಗ್ರಿ ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.
PublicNext
13/04/2022 10:41 pm