ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳಿ ಮೇಲೆ ವಿಡಿಯೋ ಶೂಟಿಂಗ್- ರೈಲಿಗೆ ಸಿಲುಕಿ ಮೂವರು ವಿದ್ಯಾರ್ಥಿಗಳು ಸಾವು

ಚೆನ್ನೈ: ಇನ್‌ಸ್ಟಾಗ್ರಾಮ್​ನಲ್ಲಿ ವಿಡಿಯೋ ಅಪ್ಲೋಡ್ ಮಾಡಲು​ ರೈಲ್ವೆ ಹಳಿ ಮೇಲೆ ನಿಂತು ಶೂಟಿಂಗ್ ಮಾಡುತ್ತಿದ್ದ ಮೂವರು ಯುವಕರು ಬಲಿಯಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆಂಗಲ್ಪಟ್ಟು ಪಕ್ಕದ ಚೆಟ್ಟಿಪುನ್ನಿಯಂ ಪ್ರದೇಶದ ಅಶೋಕ್ ಕುಮಾರ್, ಪ್ರಕಾಶ್ ಮತ್ತು ಮೋಹನ್ ಎಂಬುವರು ಮೃತ ವಿದ್ಯಾರ್ಥಿಗಳು. ಇವರು ಆಗಾಗ ಸೆಲ್ಫಿ ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್​ನಲ್ಲಿ ಹಾಕುತ್ತಿದ್ದರು. ಅದರಂತೆ ಮಾರ್ಚ್ 7ರ ಸಂಜೆ ಮೂವರು ರೈಲು ಹಳಿ ಮೇಲೆ ನಿಂತು ವಿಡಿಯೋ ಮಾಡುತ್ತಿದ್ದಾಗ ಚೆನ್ನೈನಿಂದ ಚೆಂಗಲ್ಪಟ್ಟಿಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಯುವಕರ ಮೃತದೇಹ ಸ್ಥಳದಲ್ಲೇ ಚೆಲ್ಲಾಪಿಲ್ಲಿಯಾಗಿದ್ದು, ಧಾರುಣವಾಗಿ ಸಾವನ್ನಪ್ಪಿದ್ದಾರೆ.

ಚೆಂಗಲ್ಪಟ್ಟು ರೈಲ್ವೆ ಪೊಲೀಸರು ಯುವಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Edited By : Vijay Kumar
PublicNext

PublicNext

08/04/2022 04:53 pm

Cinque Terre

53.42 K

Cinque Terre

4