ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಜಯ್ ರಾವತ್ ಗೆ ಇಡಿ ಶಾಕ್ : 1034 ಕೋಟಿ ರೂ ಆಸ್ತಿ ಮುಟ್ಟುಗೋಲು

ನವದೆಹಲಿ : ಪತ್ರಾ ಚಾವ್ಲ್ ಭೂ ಹಗರಣ ಪ್ರಕರಣದಲ್ಲಿ 1,034 ಕೋಟಿ ರೂ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಶಿವ ಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಸೇರಿದ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿದೆ.

ಹೌದು ಶಿವಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ ಶಾಕ್ ಕೊಟ್ಟಿದೆ. ಭೂ ಹಗರಣ ಪ್ರಕರಣ ಸಂಬಂಧಿಸಿದಂತೆ ಸಂಜಯ್ ರಾವತ್ ಅವರಿಗೆ ಸೇರಿದ್ದ ಅಲಿಬಾಗ್ ನಲ್ಲಿರುವ ಎಂಟು ಭೂಮಿಗಳು ಹಾಗೂ ಮಹಾರಾಷ್ಟ ರಾಜಧಾನಿ ಮುಂಬಯಿಯ ದಾದರ್ ನಲ್ಲಿ ಇರುವ ಒಂದು ಫ್ಲ್ಯಾಟ್ ಅನ್ನು ಹಗರಣಕ್ಕೆ ಸಂಬಂಧಿಸಿದಂತೆ ಇಡಿ ತನ್ನ ವಶಕ್ಕೆ ಪಡೆದುಕೊಂಡಿದೆ.

ಸಂಜಯ್ ರಾವತ್ ಅವರ ಸ್ನೇಹಿತ ಎನ್ನಲಾಗಿರುವ ಪ್ರವೀಣ್ ರಾವತ್ ಎಂಬುವವರ ವಿರುದ್ಧ ಶುಕ್ರವಾರವಷ್ಟೇ ಇ.ಡಿ ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿ ಆರೋಪಪಟ್ಟಿ ಸಲ್ಲಿಸಿತ್ತು.

Edited By : Nirmala Aralikatti
PublicNext

PublicNext

05/04/2022 04:45 pm

Cinque Terre

31.17 K

Cinque Terre

20

ಸಂಬಂಧಿತ ಸುದ್ದಿ