ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಬೆದರಿಸಿ ಹಣ ಕೀಳುತ್ತಿದ್ದ ನಕಲಿ ಸ್ವಾಮೀಜಿಗೆ ಧರ್ಮದೇಟು

ಹಾವೇರಿ: ದುಡಿಯೋದಕ್ಕೆ ಹೋದ ನಿನ್ನ ಗಂಡ ವಾಪಸ್ ಬರಬೇಕೆಂದರೆ ನೀನು ₹5,000 ಕೊಡಬೇಕು. ಇಲ್ಲವಾದರೆ ನಿನ್ನ ಗಂಡ ಹೆಣವಾಗಿ ಬರುತ್ತಾನೆ ಎಂದು ಹೆದರಿಸಿ ಹಣ ಕೀಳುತ್ತಿದ್ದ ನಕಲಿ ಸ್ವಾಮೀಜಿಯನ್ನು ಹಿಡಿದ ಗ್ರಾಮಸ್ಥರು ಧರ್ಮದೇಟು ಕೊಟ್ಟಿದ್ದಾರೆ.

ಎರಡು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ. ಈತ ವಿಜಯಪುರ ಜಿಲ್ಲೆಯ ಮೂಲದವನು ಎನ್ನಲಾಗಿದೆ. 'ನಿಮ್ಮ ಮನೆಯಲ್ಲಿ ಸಮಸ್ಯೆ ಇದೆ. ನೀವು ಶಾಂತಿ ಮಾಡಿಸಬೇಕು. ನಾವು ಮಠದ ಸ್ವಾಮಿಗಳು. ನಮಗೆ ಧನಸಹಾಯ ಮಾಡಬೇಕು ಎನ್ನುತ್ತ ಹಣ ಪೀಕುತ್ತಿದ್ದ ಸ್ವಾಮಿ, ಕಾರಡಗಿ, ಜಕ್ಕಿನಕಟ್ಟಿ ಹಾಗೂ ಮಾದಾಪುರ ಗ್ರಾಮದಲ್ಲಿ 25 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹಿಸಿದ್ದ ಎನ್ನಲಾಗಿದೆ. ಈತನ ಚಲನವಲನಗಳನ್ನು ಗಮನಿಸಿದ ಜನ ಅನುಮಾನ ಬಂದು ವಿಚಾರಿಸಿದ್ದಾರೆ. ನಂತರ ಅಸಲಿಯತ್ತು ತಿಳಿದು ಧರ್ಮದೇಟು ನೀಡಿದ್ದಾರೆ. 'ನಿಮ್ಮಿಂದಲೇ ಹಿಂದೂ ಧರ್ಮಕ್ಕೆ ಕೆಟ್ಟ ಹೆಸರು' ಎಂದು ಆಕ್ರೋಶಿತರಾದ ಸಾರ್ವಜನಿಕರು ನಕಲಿ ಸ್ವಾಮಿಗೆ ಥಳಿಸಿದ್ದಾರೆ. ಆಗ ಕಾವಿ ಕಳಚಿದ ನಕಲಿ ಸ್ವಾಮಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

Edited By : Manjunath H D
PublicNext

PublicNext

31/03/2022 08:39 pm

Cinque Terre

105.36 K

Cinque Terre

16