ತುಮಕೂರು : ಸುಮಾರು 5 ತಿಂಗಳ ಹಿಂದೆ 45ರ ಶಂಕರಣ್ಣ ಎನ್ನುವ ವ್ಯಕ್ತಿಯನ್ನು 25ರ ಮೇಘನಾ ಎನ್ನುವ ಯುವತಿ ಮದುವೆಯಾಗಿ ಸುದ್ದಿಯಾಗಿದ್ದರು. ಇಂದು ಶಂಕರಣ್ಣ ನೇಣಿಗೆ ಶರಣಾಗಿದ್ದಾನೆ. ಇತ್ತ ಈತನ ಸಾವಿಗೆ ಆಕೆಯ ಪತ್ನಿ ಮೇಘನಾ ಕಾರಣವೆಂದು ಶಂಕರಣ್ಣನ ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಇದರ ಮಧ್ಯೆ ಮಾತನಾಡಿದ ಮೇಘನಾ ಜೊತೆ ಮೇಘನಾ ನಾನು 4 ತಿಂಗಳ ಗರ್ಭಿಣಿ ನಾನು ನನ್ನ ಗಂಡನ ಸಾವಿಗೆ ಕಾರಣವಲ್ಲ ಎಂದಿದ್ದಾರೆ. ಘಟನೆ ಕುರಿತು ಮಾತನಾಡಿರುವ ಶಂಕರಣ್ಣ ಅವರ ತಾಯಿ ರಂಗಮ್ಮ, ಸೊಸೆ ದಿನಾಲೂ ಜಗಳ ಮಾಡುತ್ತಿದ್ದಳು, ಕಿರಿಕಿರಿ ಕೊಡುತ್ತಿದ್ದಳು, ಮಗನಿಗಿದ್ದ 3 ಎಕರೆ ಜಮೀನು ಮಾರಿ ಬೆಂಗಳೂರಿಗೆ ಹೋಗೋಣ ಎನ್ನುತ್ತಿದ್ದಳು ಎಂದು ಮೇಘನಾ ವಿರುದ್ಧ ಆರೋಪಿಸಿದ್ದಾರೆ.
ನನ್ನನ್ನು ಹೊರಹಾಕಿ – ಹೊರಹಾಕಿ ಎಂದು ಪೀಡಿಸುತ್ತಿದ್ದಳು. ಆದರೆ, ಮಗ ಮಾತ್ರ ನಾನು ನಮ್ಮಮ್ಮನನ್ನು ಬಿಟ್ಟು ಬರುವುದಿಲ್ಲ. ಇಲ್ಲಿಂದ ಆಚೆ ಬಂದರೆ ಸತ್ತು ಹೋಗುತ್ತೇನೆ ಎಂದು ಹೇಳಿದ್ದ ಎಂದು ಅಳಲು ತೋಡಿಕೊಂಡಿದ್ದಾರೆ.
PublicNext
29/03/2022 03:45 pm